ADVERTISEMENT

ಹೈಕೋರ್ಟ್‌ ಎಆರ್‌ಜಿ ಕಚೇರಿ ಇಮೇಲ್‌ಗೆ ಬಾಂಬ್‌ ಬೆದರಿಕೆ ಸಂದೇಶ: ಕಲಾಪ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 7:08 IST
Last Updated 7 ಜನವರಿ 2026, 7:08 IST
   

ಧಾರವಾಡ: ಹೈಕೋರ್ಟ್‌ ಪೀಠದ ಎಆರ್‌ಜಿ (ಅಡಿಷನಲ್‌ ರಿಜಿಸ್ಟ್ರಾರ್‌ ಜನರಲ್‌) ಕಚೇರಿ ಇಮೇಲ್‌ಗೆ ಮಂಗಳವಾರ ಬಾಂಬ್‌ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.

ಕೋರ್ಟ್‌ ಕಲಾಪ ನಿಲ್ಲಿಸಿ ಎಲ್ಲರನ್ನೂ ಹೊರಗೆ ಕಳಿಸಿ ಪರಿಶೀಲನೆ ನಡೆಸಿದರು. ಕೋರ್ಟ್‌ ಕಟ್ಟಡದ ಮೂರು ಹಂತಸ್ತು, ಮುಂದಿನ ಉದ್ಯಾನ ಮತ್ತು ಅಕ್ಕಪಕ್ಕದ ಜಾಗದಲ್ಲಿ ತಪಾಸಣೆ ನಡೆಸಿದರು.

‘ಮಧ್ಯಾಹ್ನ 1.55ರೊಳಗೆ ಕೋರ್ಟ್‌ ಖಾಲಿ ಮಾಡಿ, ಬಾಂಬ್‌ ಇಡಲಾಗಿದೆ, ಯಾವ ಕ್ಷಣದಲ್ಲಾದರೂ ಸಿಡಿಯಬಹುದು ಆತ್ಮಹತ್ಯಾ ದಾಳಿ ಆಗಬಹುದು ಎಂದು ಇಮೇಲ್‌ನಲ್ಲಿ ಸಂದೇಶ ಬಂದಿತ್ತು. ಅದು ಹುಸಿ ಎಂದು ನೋಡಿದಾಗಲೇ ಅನಿಸಿತ್ತು. ಇ–ಮೇಲ್‌ ಕಳಿಸಿದವರು ಯಾರು ಎಂದು ಗೊತ್ತಿಲ್ಲ, ಸೈಬರ್‌ ಪೊಲೀಸರು ಪತ್ತೆ ಹಚ್ಚಬೇಕು. ಪೊಲೀಸರು ಎಲ್ಲ ಕಡೆ ಪರಿಶೀಲನೆ ಮಾಡಿದ್ದಾರೆ’ ಎಂದು ಎಆರ್‌ಜಿ ಶಾಂತವೀರ ಶಿವಪ್ಪ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಮಧ್ಯಾಹ್ನ 3.30ರ ನಂತರ ಮತ್ತೆ ಕೋರ್ಟ್‌ನಲ್ಲಿ ಪ್ರಕ್ರಿಯೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.