ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಹೊಸ ವಾಯವ್ಯ ಕೇಂದ್ರ ಬಸ್ ನಿಲ್ದಾಣ ಬಳಿಯಿರುವ ಮಾರ್ವೆಲ್ ಎಕ್ರಾನ್‌ನಲ್ಲಿ ಸೌತ್ ಇಂಡಿಯಾ ಶಾಪಿಂಗ್ ಮಾಲ್‌ನ್ನು ಬುಧವಾರ ನಟಿ ರಚಿತಾ ರಾಮ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮಾಲ್‌ನಲ್ಲಿನ ವಿವಿಧ ಸೀರೆಗಳನ್ನು ವೀಕ್ಷಿಸಿದರು. ಮಕ್ಕಳ ಮತ್ತು ಪುರುಷರು ಉಡುಪಿನ ವಿಭಾಗಕ್ಕೂ ಭೇಟಿ ನೀಡಿ, ವೈವಿಧ್ಯತೆ ಕಂಡು ಹರ್ಷ ವ್ಯಕ್ತಪಡಿಸಿದರು. ವಿವಿಧ ಬಗೆಯ ಆಕರ್ಷಕ ಬಟ್ಟೆಗಳನ್ನು ಕಂಡು, ಖುಷಿ ಪಟ್ಟರು.
‘ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಶಾಪಿಂಗ್ ಮಾಲ್ ಆರಂಭಿಸುವ ಮೂಲಕ ಸೌತ್ ಇಂಡಿಯಾ ಶಾಪಿಂಗ್ ಮಾಲ್ ಕರ್ನಾಟಕಕ್ಕೂ ಕಾಲಿಟ್ಟಿದೆ. ಶೀಘ್ರದಲ್ಲಿ ರಾಜ್ಯದಲ್ಲಿ ಇನ್ನು ಐದು ಶಾಪಿಂಗ್ ಮಾಲ್ ಉದ್ಘಾಟಿಸಲಿದ್ದು, ಅವರ ವ್ಯಾಪಾರ ವಹಿವಾಟು ಉನ್ನತ ಮಟ್ಟಕ್ಕೇರಲಿ’ ಎಂದು ರಚಿತಾ ರಾಮ್ ಶುಭ ಹಾರೈಸಿದರು.
‘ಹಬ್ಬ ಹಾಗೂ ಮದುವೆ ಸೀಸನ್‌ಗೆ ಬೇಕಾದ ವೈವಿಧ್ಯತೆ ಹಾಗೂ ಆಕರ್ಷಕ ವಿನ್ಯಾಸದ, ಉತ್ತಮ ಗುಣಮಟ್ಟದ ಸೀರೆಗಳು ಇಲ್ಲಿವೆ. ಸಾಂಪ್ರದಾಯಿಕ ಹಾಗೂ ಫ್ಯಾನ್ಸಿ ಸೀರೆಗಳು, ಮಕ್ಕಳು ಮತ್ತು ಪುರುಷರಿಗೆ ಬೇಕಾದ ಉಡುಪುಗಳು ಲಭ್ಯ ಇವೆ. ಒಂದೇ ಕಡೆ ಎಲ್ಲ ರೀತಿ ಬಟ್ಟೆಗಳು ಸಿಗುತ್ತವೆ. ಸಾವಿರಕ್ಕಿಂತ ಹೆಚ್ಚು ವಿಶೇಷ ಕೊಡುಗೆಗಳಿದ್ದು, ದರವೂ ಕೈಗೆಟಕುವಂತಿದೆ’ ಎಂದರು.
ಮಾಲ್‌ನ ಅಧ್ಯಕ್ಷ ಪೊಟ್ಟಿ ವೆಂಕಟೇಶ್ವರಲು ಮಾತನಾಡಿ, ‘35ನೇ ಮಳಿಗೆಯೊಂದಿಗೆ ಕರ್ನಾಟಕಕ್ಕೂ ಸೌತ್ ಇಂಡಿಯಾ ಶಾಪಿಂಗ್ ಮಾಲ್ ಕಾಲಿಟ್ಟಿರುವುದು ಹೆಮ್ಮೆಯ ವಿಷಯ. ದಕ್ಷಿಣ ಭಾರತದ ಸಂಸ್ಕೃತಿ ಬಿಂಬಿಸುವ ಬಟ್ಟೆಗಳು ಇಲ್ಲಿವೆ’ ಎಂದರು.
ಮಾಲ್‌ನ ವ್ಯವಸ್ಥಾಪಕ ನಿರ್ದೇಶಕ ಸೀರ್ನಾ ರಾಜಮೌಳಿ ಮಾತನಾಡಿ, ’ಹಬ್ಬ, ಮದುವೆ ಮತ್ತು ಕುಟುಂಬದ ಶಾಪಿಂಗ್ ಮಾಡಬಹುದಾದ ಮಾಲ್ ಇದಾಗಿದೆ’ ಎಂದರು.
ಬೆಳಿಗ್ಗೆಯಿಂದಲೇ ಮಾಲ್ ಎದುರು ಅಭಿಮಾನಿಗಳು ಜಮಾಯಿಸಿದ್ದ ಅಭಿಮಾನಿಗಳ ಕೈ ಕುಲುಕಿದ ರಚಿತಾ ರಾಮ್ ಅವರು, ನಂತರ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಕಾಂಚಿಪುರಂ ರೇಷ್ಮೆ ಸೀರೆ ಹಾಗೂ ಆಕರ್ಷಕ ವಿನ್ಯಾಸದ ಡಿಸೈನರ್ ಸೀರೆಗಳು ಲಭ್ಯ ಇವೆ. ಸಾಂಪ್ರದಾಯಿಕ ಪಾಶ್ಚಿಮಾತ್ಯ ಹಾಗೂ ಇಂಡೋ ಪಾಶ್ಚಿಮಾತ್ಯ ಶೈಲಿಯ ಉಡುಪುಗಳು ಒಂದೇ ಸೂರಿನಡಿ ಸಿಗುತ್ತವೆ.ತಿರುವೀಧುಲ ಪ್ರಸಾದ ರಾವ್ ನಿರ್ದೇಶಕ ಸೌತ್ ಇಂಡಿಯಾ ಮಾಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.