ADVERTISEMENT

ಹುಬ್ಬಳ್ಳಿ: ಪ್ರಶಸ್ತಿ ಹಣ ಸರ್ಕಾರಿ ಶಾಲೆಗೆ ದೇಣಿಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:27 IST
Last Updated 2 ಜುಲೈ 2025, 15:27 IST
ಲಿಂಗರಾಜ ರಾಮಾಪುರ
ಲಿಂಗರಾಜ ರಾಮಾಪುರ   

ಹುಬ್ಬಳ್ಳಿ: ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಾರಣ ತಾಲ್ಲೂಕಿನ ಕಿರೇಸೂರ ಪ್ರೌಢಶಾಲೆಯ ಶಿಕ್ಷಕ ಲಿಂಗರಾಜ ರಾಮಾಪುರ ಅವರಿಗೆ ಬೆಂಗಳೂರಿನ ಜವಾಹರಲಾಲ್ ನೆಹರೂ ಸಂಶೋಧನಾ ಕೇಂದ್ರದಿಂದ ಈಚೆಗೆ ಸಿ.ಎನ್.ಆರ್. ರಾವ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಪ್ರಶಸ್ತಿ ಮೊತ್ತ ₹30 ಸಾವಿರವವನ್ನು ಲಿಂಗರಾಜ ರಾಮಾಪುರ ಅವರು ತಮ್ಮ ಹುಟ್ಟೂರಾದ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದಲ್ಲಿ ತಾವು ಕಲಿತ ಸರ್ಕಾರಿ ಶಾಲೆಗೆ ವೈಜ್ಞಾನಿಕ ಕಾರ್ಯಕ್ರಮ ಆಯೋಜಿಸಲು ದತ್ತಿನಿಧಿಯಾಗಿ ದೇಣಿಗೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT