ADVERTISEMENT

ಹುಬ್ಬಳ್ಳಿ–ಧಾರವಾಡ: ಪಾಲಿಕೆ ಉದ್ಯಾನಗಳ ಅಭಿವೃದ್ಧಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 13:45 IST
Last Updated 13 ಫೆಬ್ರುವರಿ 2025, 13:45 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಗಜಾನನ ಮಹಾಮಂಡಳದ ಸದಸ್ಯರು ಗುರುವಾರ ಹುಬ್ಬಳ್ಳಿಯಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರಿಗೆ ಮನವಿ ಸಲ್ಲಿಸಿದರು
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಗಜಾನನ ಮಹಾಮಂಡಳದ ಸದಸ್ಯರು ಗುರುವಾರ ಹುಬ್ಬಳ್ಳಿಯಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರಿಗೆ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಗಜಾನನ ಮಹಾಮಂಡಳದ ಸದಸ್ಯರು ಗುರುವಾರ ನಗರದ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮಹಾಮಂಡಳದ ಅಧ್ಯಕ್ಷ ಡಿ.ಗೋವಿಂದರಾವ್ ಮಾತನಾಡಿ, ‘ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಲವು ಉದ್ಯಾನಗಳು ಹಾಳಾಗಿವೆ. ಕೆಲವು ಉದ್ಯಾನಗಳು ಒತ್ತುವರಿಯಾಗಿವೆ. ಅಗತ್ಯ ಮೂಲಸೌಕರ್ಯಗಳಿಲ್ಲ’ ಎಂದರು.

ಗೋಕುಲ ರಸ್ತೆಯಲ್ಲಿದ್ದ ಸಾರ್ವಜನಿಕ ಉದ್ಯಾನವನ್ನು ನಾಲ್ಕು ದಶಕಗಳಿಂದ ಸಾರ್ವಜನಿಕರು ಒತ್ತುವರಿ ಮಾಡಿಕೊಂಡಿದ್ದರು. ಮಹಾಮಂಡಳದಿಂದ ಹೋರಾಟ ಮಾಡಿದ ನಂತರ ನ್ಯಾಯಾಲಯ ಒತ್ತುವರಿ ತೆರವಿಗೆ ಆದೇಶ ಮಾಡಿದೆ. ಆದರೆ, ಪಾಲಿಕೆಯಿಂದ ಈವರೆಗೂ ಉದ್ಯಾನಕ್ಕೆ ಬೇಲಿ ಅಳವಡಿಸಿಲ್ಲ ಎಂದು ದೂರಿದರು.

ADVERTISEMENT

ಪಾಲಿಕೆ ವ್ಯಾಪ್ತಿಯ ಉದ್ಯಾನಗಳ ಜಾಗ ಒತ್ತುವರಿಯಾಗಿದ್ದನ್ನು ತೆರವು ಮಾಡಿ, ಬೇಲಿ ಅಳವಡಿಸಬೇಕು ಎಂದು ಆಗ್ರಹಿಸಿದರು. ಪಾಲಿಕೆ ಆಯುಕ್ತ ರುದ್ರೇಶ ಘಾಳಿ  ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಯೋಗಿ ವನಹಳ್ಳಿಮಠ, ಬಾಬಣ್ಣ ಯರಕದ, ಥಾಮಸ್‌ ಕಿತ್ತೂರ, ಲತಾ ತೇರದಾಳ, ರುಕ್ಮಿಣಿ ಚಲವಾದಿ, ಲಕ್ಷ್ಮಿ, ಮಂಜುಳಾ ಬೆಣ್ಣಿ, ವಸಂತ ಜಾಧವ, ರೀಟಾ ನಡಕಟ್ಟಿನ, ಸರಸ್ವತಿ ಬೆಸ್ತರ, ಜಿ.ಎನ್. ಮುಂಡಾಸದ, ಕೆ.ಎಸ್. ಬ್ಯಾಹಟ್ಟಿ, ವಿ.ಡಿ. ಡೊಂಗ್ರೆ, ಶಶಿ ಜತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.