ADVERTISEMENT

ಹುಬ್ಬಳ್ಳಿ: ತ್ಯಾಜ್ಯದ ರಾಶಿ; ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 5:18 IST
Last Updated 24 ಅಕ್ಟೋಬರ್ 2025, 5:18 IST
ಹುಬ್ಬಳ್ಳಿಯ ಹಳೇ ಕೋರ್ಟ್‌ ಎದುರಿನ ಸೇತುವೆ ಕೆಳಗೆ ಬಾಳೆಕಂಬ, ಉತ್ತರಾಣಿ ಕಡ್ಡಿಯ ತ್ಯಾಜ್ಯ ಬಿದ್ದಿದೆ
ಪ್ರಜಾವಾಣಿ ಚಿತ್ರ: ಗುರು ಹಬೀಬ 
ಹುಬ್ಬಳ್ಳಿಯ ಹಳೇ ಕೋರ್ಟ್‌ ಎದುರಿನ ಸೇತುವೆ ಕೆಳಗೆ ಬಾಳೆಕಂಬ, ಉತ್ತರಾಣಿ ಕಡ್ಡಿಯ ತ್ಯಾಜ್ಯ ಬಿದ್ದಿದೆ ಪ್ರಜಾವಾಣಿ ಚಿತ್ರ: ಗುರು ಹಬೀಬ     

ಹುಬ್ಬಳ್ಳಿ: ದೀಪಾವಳಿ ಹಬ್ಬಕ್ಕಾಗಿ ಮಾರಾಟ ಮಾಡಿ ಉಳಿದಂತಹ ಬಾಳೆಕಂಬ, ಉತ್ತರಾಣಿ ಕಡ್ಡಿ, ಚೆಂಡು ಹೂವಿನ ಗಿಡ ಹಾಗೂ ಹೂವಿನ ಮಾಲೆಗಳನ್ನು ರೈತರು ರಸ್ತೆ ಬದಿಯಲ್ಲಿಯೇ ಎಸೆದಿದ್ದು, ಇದು ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ರಸ್ತೆ ಬದಿ, ಹಳೇ ಕೋರ್ಟ್‌ ಎದುರಿನ ಕೆಳಸೇತುವೆ ಬಳಿ, ಶಿರೂರು ಪಾರ್ಕ್ ರಸ್ತೆ ಬದಿ ಸೇರಿದಂತೆ ಮಾರುಕಟ್ಟೆ ಪ್ರದೇಶಗಳ ರಸ್ತೆ ಬದಿಯಲ್ಲಿ ಇವುಗಳ ತ್ಯಾಜ್ಯ ಬಿದ್ದಿದೆ. ‌

‘ನಗರದಲ್ಲಿ ಮಳೆ ಸುರಿದ ಪರಿಣಾಮ ಬಾಳೆ, ಹೂವಿನ ತ್ಯಾಜ್ಯವು ಮಧ್ಯ ರಸ್ತೆಯ ತನಕ ಹರಿದು ಬಂದಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ದ್ವಿಚಕ್ರ ವಾಹನ ಸವಾರರು ದೂರುತ್ತಾರೆ. 

ADVERTISEMENT
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬಾಳೆಕಂಬ ಹೂವಿನ ತ್ಯಾಜ್ಯ ಬಿದ್ದಿದೆ ಪ್ರಜಾವಾಣಿ ಚಿತ್ರ: ಗುರು ಹಬೀಬ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.