ADVERTISEMENT

ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಸುತ್ತ ಚಿರತೆ ಚಲನವಲನ ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 6:28 IST
Last Updated 28 ಡಿಸೆಂಬರ್ 2025, 6:28 IST
ಚಿರತೆ ದಾಳಿಗೆ ಸಿಲುಕಿ ಸತ್ತು ಬಿದ್ದಿರುವ ನಾಯಿ
ಚಿರತೆ ದಾಳಿಗೆ ಸಿಲುಕಿ ಸತ್ತು ಬಿದ್ದಿರುವ ನಾಯಿ   

ಹುಬ್ಬಳ್ಳಿ: ಸಮೀಪದ ಗಾಮನಗಟ್ಟಿ ಕೈಗಾರಿಕಾ ಪ್ರದೇಶ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಚಿರತೆಯ ಚಲನವಲನಗಳು, ಶುಕ್ರವಾರ ಮತ್ತು ಶನಿವಾರ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿವೆ.

ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತ್ಯೇಕ ಕಡೆ ನಾಯಿಗಳ ಸಮೇತ ಎರಡು ಬೋನು, ವಿಮಾನ ನಿಲ್ದಾಣ ಮತ್ತು ಗಾಮನಗಟ್ಟಿ ಹೊರವಲಯದಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಿದ್ದಾರೆ.

ಚಿರತೆಯು ಶುಕ್ರವಾರ ಸಂಜೆ 6.40ಕ್ಕೆ ವಿಮಾನ ನಿಲ್ದಾಣದ ಕಾಂಪೌಂಡ್‌ನಿಂದ ಹೊರಗೆ ಜಿಗಿದು, ಶನಿವಾರ ಬೆಳಗಿನ ಜಾವ  ಗಾಮನಗಟ್ಟಿ ಕಡೆಯಿಂದ ಪುನಃ ವಿಮಾನ ನಿಲ್ದಾಣದ ಆವರಣದ ಒಳಗೆ ಹೋಗಿರುವ ದೃಶ್ಯಗಳು ಟ್ರ್ಯಾಪ್‌ಗಳಲ್ಲಿ
ದಾಖಲಾಗಿವೆ.

ADVERTISEMENT

‘ಚಿರತೆ ಓಡಾಡುವ ಮಾರ್ಗದಲ್ಲೇ ಎರಡೂ ಬೋನುಗಳನ್ನು ಇಟ್ಟಿದ್ದರೂ, ಅದು ಬೋನಿಗೆ ಬಿದ್ದಿಲ್ಲ. ಗಾಮನಗಟ್ಟಿ ಹೊರವಲಯದಲ್ಲಿ  ಹಂದಿ, ಮೊಲ, ನವಿಲು, ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬೋನಿನಲ್ಲಿನ ನಾಯಿ ತಿನ್ನಲು ಚಿರತೆ ಬಂದಿಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು
ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.