ADVERTISEMENT

ಮುಂದುವರೆದ ಹಮಾಲಿ ಕಾರ್ಮಿಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 16:11 IST
Last Updated 12 ಸೆಪ್ಟೆಂಬರ್ 2024, 16:11 IST
ಹುಬ್ಬಳ್ಳಿ ಅಮರಗೋಳದ ಎಪಿಎಂಸಿ ಆವರಣದಲ್ಲಿ ಈರುಳ್ಳಿ ವಿಭಾಗದ ಹಮಾಲರು ನಡೆಸುತ್ತಿರುವ ಪ್ರತಿಭಟನೆಯು ಗುರುವಾರವೂ ಮುಂದುವರೆಯಿತು 
ಹುಬ್ಬಳ್ಳಿ ಅಮರಗೋಳದ ಎಪಿಎಂಸಿ ಆವರಣದಲ್ಲಿ ಈರುಳ್ಳಿ ವಿಭಾಗದ ಹಮಾಲರು ನಡೆಸುತ್ತಿರುವ ಪ್ರತಿಭಟನೆಯು ಗುರುವಾರವೂ ಮುಂದುವರೆಯಿತು    

ಹುಬ್ಬಳ್ಳಿ: ಹಮಾಲಿ ದರ ಪರಿಷ್ಕರಣೆಗೆ ಒತ್ತಾಯಿಸಿ ಇಲ್ಲಿನ ಅಮರಗೋಳದ ಎಪಿಎಂಸಿ ಆವರಣದಲ್ಲಿ ಈರುಳ್ಳಿ ವಿಭಾಗದ ಹಮಾಲರು ನಡೆಸುತ್ತಿರುವ ಪ್ರತಿಭಟನೆಯು ಗುರುವಾರವೂ ಮುಂದುವರೆಯಿತು. 

ನಿಯಮದನ್ವಯ ಕೂಲಿ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ಸೆ.2ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಎಪಿಎಂಸಿ ಕಾರ್ಯದರ್ಶಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಮಾಲೀಕರ ಸಂಘದ ಮುಖಂಡರೊಂದಿಗೆ ಚರ್ಚಿಸಿ ಸೆ.11ರಂದು ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಕೂಲಿ ಪರಿಷ್ಕರಣೆ ಮಾಡದಿರುವುದನ್ನು ಖಂಡಿಸಿ, ಹಮಾಲಿ ಕಾರ್ಮಿಕರು ಮತ್ತೆ ಮುಷ್ಕರ ಮುಂದುವರೆಸಿದ್ದಾರೆ. 

ಕೂಡಲೇ ನಿಯಮದಂತೆ ಹಮಾಲಿ ದರ ಪರಿಷ್ಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ADVERTISEMENT

ಕಾರ್ಮಿಕ ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರ, ದುರಗಪ್ಪ ಚಿಕ್ಕತುಂಬಳ, ಮಂಜುನಾಥ್ ಹುಜರಾತಿ, ಸಿದ್ದು ಜಾಲಗಾರ, ಕಾಕಪ್ಪ ಜಾಲಗಾರ, ಸಯ್ಯದಬಾಬು ಗಂಗಾವತಿ, ಮಲ್ಲಪ್ಪ ಹೆಬ್ಬಳ್ಳಿ, ಶಿವು ಜಾಲಗಾರ, ಲಕ್ಷವ್ವ ಹೊಸೂರಿ ಮುಂತಾವರು ಹೋರಾಟದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.