ಹುಬ್ಬಳ್ಳಿ: ನಗರದ ಹವ್ಯಾಸಿ ಸೈಕ್ಲಿಸ್ಟ್ ಬಸನಗೌಡ ಶಿವಳ್ಳಿ (35) ಸ್ನೇಹಿತರ ಜೊತೆಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಶನಿವಾರ ಒಟ್ಟು 200 ಕಿ.ಮೀ. ಸೈಕಲ್ ಓಡಿಸುವ ಗುರಿ ಇಟ್ಟುಕೊಂಡಿತ್ತು. ಹುಬ್ಬಳ್ಳಿಯಿಂದ ಶಿಗ್ಗಾವಿಗೆ ಹೋಗಿ ವಾಪಸ್ ಬರುವುದು, ಹುಬ್ಬಳ್ಳಿಯಿಂದ ಕಿತ್ತೂರಿಗೆ ಹೋಗಿ ಮರಳುವುದು ಗುರಿಯಾಗಿತ್ತು ಒಟ್ಟು 35 ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು.
ಶಿವಳ್ಳಿ ಅವರು ರೈಡ್‌ಗೆ ಹೆಸರು ನೋಂದಾಯಿಸಿರಲಿಲ್ಲ. ಆದರೆ,ಸ್ನೇಹಿತರಿಗೆ ಬೀಳ್ಕೊಡುವ ಸಲುವಾಗಿ ಹುಬ್ಬಳ್ಳಿಯಿಂದ ಸೈಕಲ್ ಏರಿದ್ದರು. ಕೆಲ ಕಿ.ಮೀ. ದೂರ ಬಂದು ವಾಪಸ್ ಹೋಗುವುದಾಗಿ ತಿಳಿಸಿದ್ದರು. ಸೈಕಲ್ ಮೇಲಿನ ಪ್ರೀತಿಯಿಂದಾಗಿ ಶಿಗ್ಗಾವಿ ತನಕ ನಮ್ಮ ಜೊತೆ ಬಂದರು. ಹಣ್ಣುಗಳನ್ನು ತಿಂದು ಕೆಲ ಹೊತ್ತು ಹರಟೆ ಹೊಡೆದರು. ಶಿಗ್ಗಾವಿಯಿಂದ ಮೂರು ಕಿ.ಮೀ. ಮುಂದೆ ಹೋದಾಗ ಅವರು ದಿಢೀರನೆ ಕುಸಿದು ಬಿದ್ದು ಮೃತಪಟ್ಟರು. ನಮ್ಮ ತಂಡದಲ್ಲಿದ್ದ ವೈದ್ಯರು ಪರೀಕ್ಷೆ ಮಾಡಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದು ಖಚಿತವಾಗಿದೆ ಎಂದು ಶಿವಳ್ಳಿ ಅವರ ಜೊತೆಯಿದ್ದ ಕೌಸ್ತುಬ್ ಪ್ರಜಾವಾಣಿಗೆ ತಿಳಿಸಿದರು.
ಶಿವಳ್ಳಿ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.