ADVERTISEMENT

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಎರಡನೇ ಪ‍ಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 11:30 IST
Last Updated 21 ಆಗಸ್ಟ್ 2021, 11:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಶನಿವಾರ 15 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನುಬಿಡುಗಡೆ ಮಾಡಿದೆ. ಗುರುವಾರ ಮಧ್ಯರಾತ್ರಿ 30 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿತ್ತು.

ನಾಮಪತ್ರ ಸಲ್ಲಿಸಲು ಆ. 23 ಕೊನೆಯ ದಿನವಾಗಿದೆ. ಒಟ್ಟು 82 ವಾರ್ಡ್‌ಗಳ ಪೈಕಿ 45 ಕ್ಷೇತ್ರಗಳಿಗಷ್ಟೇ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸಿದೆ.

ಅಭ್ಯರ್ಥಿಗಳು: ಅನೂಪ ಕುಮಾರ ಬಿಜವಾಡ (ವಾರ್ಡ್‌ ಸಂಖ್ಯೆ 61), ಮಲ್ಲಪ್ಪ ಶಿರಕೋಳ (63), ರುಕ್ಮಿಣಿ ಶೇಜವಾಡಕರ (64), ಅನುಷಾ ಜಾಧವ (69), ಸ್ವಾಲೆಹಾಬೇಗಂ ಮಹಮ್ಮದ್‌ ಝಕ್ರಿಯಾ ಹೊಸೂರ (77), ಸಾರಿಕಾ ಬಿಜವಾಡ (81), ಶಾಂತಾ ಕೊಗೊಡ (82).

ADVERTISEMENT

ಸೀಮಾ ಎಸ್‌. ಮೊಗಲಿಶೆಟ್ಟರ್‌ (39), ಸಂತೋಷ ಚವ್ಹಾಣ (41), ಉಮಾ ಮುಕುಂದ (44), ಮಣಿಕಂಠ ಶ್ಯಾಗೋಟಿ (45), ವೀಣಾ ಬಾರದ್ವಾಡ (49), ಶ್ವೇತಾ ರಾಯನಗೌಡ್ರ (59), ಪಾರ್ವತೆವ್ವ ಹಿತ್ತಲಮನಿ (22) ಹಾಗೂ ಮರಿಗೆಪ್ಪ ಚನ್ನಪ್ಪ ಹೊರಡಿ (33).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.