ADVERTISEMENT

ಹುಬ್ಬಳ್ಳಿ–ಹೈದರಾಬಾದ್ ನೇರ ವಿಮಾನ ಆರಂಭ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 5:01 IST
Last Updated 28 ಏಪ್ರಿಲ್ 2022, 5:01 IST
ಹೈದರಾಬಾದ್‌ನಿಂದ ಬಂದ ನೇರ ವಿಮಾನಕ್ಕೆ ಹುಬ್ಬಳ್ಳಿಯಲ್ಲಿ ಬುಧವಾರ ಸಾಂಪ್ರದಾಯಿಕ ’ವಾಟರ್‌ ಸೆಲ್ಯೂಟ್‘ ಗೌರವ ಸಲ್ಲಿಸಲಾಯಿತು
ಹೈದರಾಬಾದ್‌ನಿಂದ ಬಂದ ನೇರ ವಿಮಾನಕ್ಕೆ ಹುಬ್ಬಳ್ಳಿಯಲ್ಲಿ ಬುಧವಾರ ಸಾಂಪ್ರದಾಯಿಕ ’ವಾಟರ್‌ ಸೆಲ್ಯೂಟ್‘ ಗೌರವ ಸಲ್ಲಿಸಲಾಯಿತು   

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ಇಂಡಿಗೊ ಸಂಸ್ಥೆ ಬುಧವಾರದಿಂದ ನಿತ್ಯ ನೇರ ವಿಮಾನಯಾನ ಸೌಲಭ್ಯ ಆರಂಭಿಸಿತು.

40 ಪ್ರಯಾಣಿಕರನ್ನು ಹೊತ್ತ ವಿಮಾನ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9.10ಕ್ಕೆ ಮುತ್ತಿನ ನಗರಿ ತಲುಪಿತು.

ಹೈದರಾಬಾದ್‌ನಿಂದ ಬೆ. 9.40ಕ್ಕೆ ಹೊರಟು ಇಲ್ಲಿಗೆ ಬೆಳಿಗ್ಗೆ 10.50ಕ್ಕೆ ಬಂದಿತು. 44 ಪ್ರಯಾಣಿಕರನ್ನು ಹೊತ್ತು ಬಂದ ವಿಮಾನಕ್ಕೆ ನಿಲ್ದಾಣದಲ್ಲಿ ಸಾಂಪ್ರದಾಯಿಕ ’ವಾಟರ್‌ ಸೆಲ್ಯೂಟ್‌‘ ಗೌರವ ಸಲ್ಲಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.