ADVERTISEMENT

ಹುಬ್ಬಳ್ಳಿ: ಲಾರಿ ಅಪಘಾತದಲ್ಲಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 5:59 IST
Last Updated 2 ಡಿಸೆಂಬರ್ 2020, 5:59 IST

ಹುಬ್ಬಳ್ಳಿ: ಬುಧವಾರ ಬೆಳಿಗ್ಗೆ ಪತ್ರಿಕೆ ಹಾಗೂ ಉಪಾಹಾರ ತರಲು ಬಂದಿದ್ದ ಯುವಕನ ಮೇಲೆ ಈರುಳ್ಳಿ ತುಂಬಿದ ಲಾರಿಚಲಿಸಿದರಿಣಾಮ ಆ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜು ಮುಂಭಾಗದಲ್ಲಿ ಘಟನೆ ನಡೆದಿದೆ. ಮಧ್ಯಪ್ರದೇಶದಿಂದ ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಹೋಗುವಾಗ ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ನಗರದ ಕೇಶ್ವಾಪುರದ 17 ವರ್ಷದ ಜುನೈದ ಶೇಕ್ ಮೃತ ವ್ಯಕ್ತಿ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.

ತಲೆಯ ಮೇಲೆಯೇ ಲಾರಿ ಹಾದು ಹೋಗಿದ್ದರಿಂದ ಮುಖ ಗುರುತು ಸಿಗದಷ್ಟು ಛಿದ್ರವಾಗಿದೆ. ಘಟನೆ ನಡೆದ ತಕ್ಷಣವೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.