
ಜೈಲು (ಪ್ರಾತಿನಿಧಿಕ ಚಿತ್ರ)
ಧಾರವಾಡ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಅಂದಾನಗೌಡ ಎಸ್. ಪಾಟೀಲಗೆ ನಾಲ್ಕು ವರ್ಷ ಜೈಲು, ₹ 1 ಲಕ್ಷ ದಂಡವನ್ನು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್– ವಿಶೇಷ ಕೋರ್ಟ್ ವಿಧಿಸಿದೆ. ₹ 51.72 ಲಕ್ಷ ಮೌಲ್ಯದ ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ.
ನ್ಯಾಯಾಧೀಶರಾದ ಜರೀನಾ ಅವರು ಈ ಆದೇಶ ನೀಡಿದ್ಧಾರೆ. ಅಂದಾನಗೌಡ ಎಸ್. ಪಾಟೀಲ ಅವರು ಹುಬ್ಬಳ್ಳಿಯ ನಿವಾಸಿ. ಅಂದಾನಗೌಡ ಅವರು ಸೇವಾ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚುವರಿಯಾಗಿ ₹ 3.52 ಕೋಟಿ ಸುಮಾರು ಶೇ 151.13 ರಷ್ಟು ಅಕ್ರಮ ಸಂಪಾದನೆ ಮಾಡಿದ್ದು ಕಂಡುಬಂದಿದೆ.
ಏನಿದು ಪ್ರಕರಣ: ಸೇವಾ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ಧಾರೆ ಎಂದು
ಅಂದಾನಗೌಡ ಪಾಟೀಲ ವಿರುದ್ಧ ಅವರ 2014 ಆಗಸ್ಟ್ 6ರಂದು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಎಸ್ಪಿ ಕೆ.ಪರಶುರಾಮ, ಇನ್‌ಸ್ಪೆಕ್ಟರ್ ಶಂಕರಗೌಡ ಎಸ್ ಬಸನಗೌಡ್ರ, ಆರಕ್ಷಕ ನಿರೀಕ್ಷಕರು ಪ್ರಕರಣ ನಡೆಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.