
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: 3 ನಿಮಿಷ 54 ಸೆಕೆಂಡ್‌ಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿವಿಧ ಬ್ರ್ಯಾಂಡ್‌ಗಳ 100 ಕಾರುಗಳನ್ನು ಗುರುತಿಸುವ ಮೂಲಕ 8 ವರ್ಷದ ಬಾಲಕ ಸಾತ್ವಿಕ್ ಬಿ.ಬಿ. ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಖಲೆ ಸೃಷ್ಟಿಸಿದ್ದಾನೆ.
7 ವರ್ಷ 8 ತಿಂಗಳು ವಯಸ್ಸಿನಲ್ಲಿ ಸಾತ್ವಿಕ್ ಈ ಸಾಧನೆ ಮಾಡಿದ್ದಾನೆ. ಈತನ ಸಾಧನೆ ಗುರುತಿಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಅ.8ರಂದು ‘ಐಬಿಆರ್ ಅಚೀವರ್’ ಎಂದು ಬಿರುದು ನೀಡಿದೆ.
ಸಾತ್ವಿಕ್, ಹುಬ್ಬಳ್ಳಿಯ ಸುಭಾಸನಗರದ ಬೈಲಪ್ಪ ಭೋವಿ ಮತ್ತು ಸುಮಾ ಹೊಸಮನಿ ದಂಪತಿಯ ಪುತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.