ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ‘ಭಾರತ ಜಗತ್ತಿನಲ್ಲೇ ನಾಲ್ಕನೇ ದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿದ ದೇಶ. ಆದರೆ, ಯಾರೋ ‘ಸತ್ತ’ ಆರ್ಥಿಕತೆ ಎಂದು ಟೀಕಿಸುತ್ತಾರೆ. ಅದನ್ನೇ ಇಲ್ಲಿಯ ಕೆಲವರು ಬೆಂಬಲಿಸುತ್ತಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
‘ದೇಶದ ಅರ್ಥ ವ್ಯವಸ್ಥೆ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. 2047ರ ವೇಳೆ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ವಿಕಸಿತ ಭಾರತ ಎಂದು ಗುರುತಿಸಿಕೊಳ್ಳಲಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಸೇನಾಬಲದಲ್ಲಿ ನಾವು ಜಗತ್ತಿನಲ್ಲೇ ಪ್ರಮುಖ ಐದು ಸ್ಥಾನದೊಳಗೆ ಇದ್ದೇವೆ. ಆಧುನಿಕ ತಂತ್ರಜ್ಞಾನ, ಶಸ್ತ್ರಾಸ್ತ್ರಗಳಿಂದ ಶತ್ರುಗಳ ನಿಖರ ನೆಲೆಯ ಮೇಲೆ ದಾಳಿ ನಡೆಸುವಷ್ಟು ಪ್ರಬಲರಾಗಿದ್ದೇವೆ. ಭಾರತವನ್ನು ಹಗುರವಾಗಿ ನೋಡಿದರೆ, ತಕ್ಕ ಉತ್ತರ ನೀಡಲು ಸಿದ್ಧರಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.