ADVERTISEMENT

ಹುಬ್ಬಳ್ಳಿಯಲ್ಲಿ ತಪ್ಪಿದ ಅವಘಡ: ಟೈರ್‌ನಲ್ಲಿ ದೋಷ; ಸುರಕ್ಷಿತ ಲ್ಯಾಂಡ್ ಆದ ವಿಮಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 6:53 IST
Last Updated 15 ಜೂನ್ 2021, 6:53 IST
ಇಂಡಿಗೋ ವಿಮಾನ, ಸಾಂದರ್ಭಿಕ ಚಿತ್ರ
ಇಂಡಿಗೋ ವಿಮಾನ, ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಕೇರಳ ರಾಜ್ಯದ ಕಣ್ಣೂರಿನಿಂದ ಹುಬ್ಬಳ್ಳಿಗೆ ಸೋಮವಾರ ರಾತ್ರಿ 8.30ಕ್ಕೆ ಬಂದ ಇಂಡಿಗೊ ವಿಮಾನ ಹಾರ್ಡ್ ಲ್ಯಾಂಡಿಂಗ್ (ಟೈರ್ ನಲ್ಲಿ ಗಾಳಿ ಕಡಿಮೆ) ಆಗಿದೆ.

ಟೈರ್ ನಲ್ಲಿ ಗಾಳಿ ಕಡಿಮೆಯಾಗಿದ್ದ ಪರಿಣಾಮ ಒಂದೆಡೆ ಒತ್ತಡ ಉಂಟಾಗಿತ್ತು. ಇದರಿಂದ ಹಾರ್ಡ್ ಲ್ಯಾಂಡಿಂಗ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನದಲ್ಲಿ ಏಳು ಜನರು ಪ್ರಯಾಣಿಸುತ್ತಿದ್ದರು. ಅವರು ಸುರಕ್ಷಿತವಾಗಿದ್ದಾರೆ.ಈ ವಿಮಾನ 18 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ತೆರಳಬೇಕಾಗಿತ್ತು. ಘಟನೆಯಿಂದಾಗಿ ಬೆಂಗಳೂರು ಪ್ರಯಾಣ ರದ್ದುಪಡಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.