
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ಮುಂಬೈನಿಂದ ಹುಬ್ಬಳ್ಳಿಗೆ ಭಾನುವಾರ ಬೆಳಿಗ್ಗೆ 7.30ಕ್ಕೆ ಬರಬೇಕಿದ್ದ ಇಂಡಿಗೊ ವಿಮಾನ ಬರಲಿಲ್ಲ.
‘ಹುಬ್ಬಳ್ಳಿಗೆ ಬರಬೇಕಿದ್ದ ಬಹುತೇಕ ವಿಮಾನಗಳು ವೇಳಾಪಟ್ಟಿಯಂತೆ ಬರುತ್ತಿವೆ. ಆದರೆ, ಡಿಸೆಂಬರ್ 3 ಮತ್ತು 4ರ ನಂತರ ಡಿಸೆಂಬರ್ 7ರಂದು ಮತ್ತೊಂದು ಬಾರಿ ಮುಂಬೈನಿಂದ ಹುಬ್ಬಳ್ಳಿಗೆ ಬರಬೇಕಾಗಿದ್ದ ಇಂಡಿಗೊ ವಿಮಾನ ಸಂಚಾರ ರದ್ದು ಮಾಡಲಾಗಿತ್ತು. ಕಾರಣ ಏನೆಂಬುದು ಗೊತ್ತಾಗಿಲ್ಲ’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ತಿಳಿಸಿದರು.
ಬೆಂಗಳೂರು, ನವದೆಹಲಿ, ಪುಣೆ ಹಾಗೂ ಹೈದರಾಬಾದ್‌ನಿಂದ ಬರಬೇಕಾಗಿದ್ದ ಮತ್ತು ಹೋಗಬೇಕಾಗಿದ್ದ ಇಂಡಿಗೊ ವಿಮಾನ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.