ಹುಬ್ಬಳ್ಳಿ: ನಗರದ ‘ಟೈ ಹುಬ್ಬಳ್ಳಿ’ ಸಂಸ್ಥೆಯು ಗೋಕುಲ ರಸ್ತೆಯ ಡೆನಿಸನ್ಸ್ ಹೋಟೆಲ್‌ನಲ್ಲಿ ಮೇ 10ರಂದು ಬೆಳಿಗ್ಗೆ 10.30ಕ್ಕೆ ಕೈಗಾರಿಕಾ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆ, ಸ್ಟಾರ್ಟ್‌ಅಪ್‌ಗಳ ಮಾಹಿತಿ, ಉದ್ಯಮ ಅಭಿವೃದ್ಧಿ ವಿಷಯಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ವಾಸುಕಿ ಕಾಶ್ಯಪ್ ಅವರು, ‘ಮಾನವ– ಯಂತ್ರ ಸಹಯೋಗ, ಡೇಟಾ ಸಂಗ್ರಹಣೆ ಮತ್ತು ವಿಶ್ಲೇಷಣಾ ಸಾಧನಗಳ ಕುರಿತು ಸಂವಾದ ನಡೆಸಿಕೊಡುವರು. ಕೆ.ಎಂ.ಜಗದೀಶ ಅವರು, ‘ಕರ್ನಾಟಕದಲ್ಲಿ ಕೈಗಾರಿಕಾ ಹೂಡಿಕೆ ಪ್ರೋತ್ಸಾಹ ನೀತಿ’, ಅನುದಾನ, ತರಬೇತಿ ಸೌಲಭ್ಯಗಳ ಕುರಿತು ಮಾತನಾಡುವರು.
ಸಣ್ಣ ಉದ್ದಿಮೆದಾರರು, ತಯಾರಿಕಾ ವಲಯದ ಪ್ರಮುಖರು, ತಂತ್ರಜ್ಞಾನ ಸಂಶೋಧಕರು ಮತ್ತು ಹೂಡಿಕೆ ವಲಯದವರು ಭಾಗವಹಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.