ಹುಬ್ಬಳ್ಳಿ: ಜೈನ ಧರ್ಮೀಯರ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಗಿರೀಶ ಮಟ್ಟೆಣ್ಣವರ ಮತ್ತು ಕುಡ್ಲಾ ರ‍್ಯಾಂಪೇಜ್ ಯೂಟ್ಯೂಬ್ ಚಾನಲ್ ಮಾಲೀಕನ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಛಬ್ಬಿ ಗ್ರಾಮದ ಅಜೀತ್ ಬಸಾಪುರ ದೂರು ನೀಡಿದ್ದಾರೆ.
‘ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡುವಾಗ ಗಿರೀಶ ಮಟ್ಟೆಣ್ಣವರ, ‘ಜೈನರು ಕ್ರೂರಿಗಳು, ದಬ್ಬಾಳಿಕೆ ಮಾಡುವವರು, ಮತಾಂಧರು ಎಂದು ಅಪಮಾನ ಮಾಡಿದ್ದಾರೆ. ಸಮುದಾಯದ ಭಾವನಗೆ ಧಕ್ಕೆ ತಂದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.