ADVERTISEMENT

ಧಾರವಾಡ: ಪ್ರೊ.ಹನೂರು ಕೃಷ್ಣಮೂರ್ತಿ, ನೀಲಗಂಗಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 13:27 IST
Last Updated 6 ಜನವರಿ 2026, 13:27 IST
<div class="paragraphs"><p>ಪ್ರೊ.ಹನೂರು ಕೃಷ್ಣಮೂರ್ತಿ, ನೀಲಗಂಗಾ ಚರಂತಿಮಠ</p></div>

ಪ್ರೊ.ಹನೂರು ಕೃಷ್ಣಮೂರ್ತಿ, ನೀಲಗಂಗಾ ಚರಂತಿಮಠ

   

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಬಿ.ಎಸ್.ಗದ್ದಗಿಮಠ ದತ್ತಿಯಡಿ ನೀಡುವ ಬಿ.ಎಸ್.ಗದ್ದಗಿಮಠ ಕನ್ನಡ ಜಾನಪದ ತಜ್ಞ ಪ್ರಶಸ್ತಿಗೆ ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಕೃಷ್ಣಮೂರ್ತಿ ಹನೂರು ಹಾಗೂ ಅನಸೂಯಾದೇವಿ ಗದ್ದಗಿಮಠ ಕನ್ನಡ ಜನಪದ ಕಲಾವಿದೆ ಪ್ರಶಸ್ತಿಗೆ ಬೆಳಗಾವಿಯ ಜನಪದ ಕಲಾವಿದೆ ನೀಲಗಂಗಾ ಚರಂತಿಮಠ ಆಯ್ಕೆಯಾಗಿದ್ದಾರೆ. 

ಪುರಸ್ಕಾರವು ತಲಾ ₹ 20 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಜ.9ರಂದು ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT