ADVERTISEMENT

ಶಾ.ಮಂ.ಕೃಷ್ಣರಾಯಗೆ ಕನ್ನಡ ಪ್ರಪಂಚ ‘ಪಾಪು’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 0:06 IST
Last Updated 20 ಜುಲೈ 2025, 0:06 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘ ನೀಡುವ ಸಿರಿಗನ್ನಡಂ ಗೆಲ್ಗೆ ರಾ.ಹ.ದೇಶಪಾಂಡೆ ಪ್ರಶಸ್ತಿಗೆ ಹಾವೇರಿಯ ‘ಗೆಳೆಯರ ಬಳಗ’ ಹಾಗೂ ಕನ್ನಡ ಪ್ರಪಂಚ ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಪ‍ತ್ರಕರ್ತ ಶಾ.ಮಂ.ಕೃಷ್ಣರಾಯ ಆಯ್ಕೆಯಾಗಿದ್ದಾರೆ.

ADVERTISEMENT

ಎರಡೂ ಪ್ರಶಸ್ತಿಗಳು ತಲಾ ₹50 ಸಾವಿರ ನಗದು, ಫಲಕ ಒಳಗೊಂಡಿವೆ. ರಾ.ಹ.ದೇಶಪಾಂಡೆ ಪ್ರಶಸ್ತಿ‌ಯನ್ನು ಜುಲೈ 20ರಂದು ಸಂಘದ ಸಂಸ್ಥಾಪನಾ ದಿನಾಚರಣೆ ಉದ್ಘಾಟನೆ ಸಮಾರಂಭದಲ್ಲಿ ಹಾಗೂ ಕನ್ನಡ ಪ್ರಪಂಚ ಪಾಟೀಲ ಪುಟ್ಟಪ್ಪ ಪ್ರಶಸ್ತಿಯನ್ನು ಜುಲೈ 26ರಂದು ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.