
ಹುಬ್ಬಳ್ಳಿ: ನಗರದ ಕಥಕ್ ನೃತ್ಯ ಕಲಾ ಕೇಂದ್ರವು ಎರಡು ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಈ ಸಂಸ್ಥೆಯು ಪಂಡಿತ್ ಮೋಹನರಾವ್ ಕಲ್ಯಾಣ್‌ಪುರ್ಕರ್ ಅವರ ಸ್ಮರಣಾರ್ಥ ಸ್ಥಾಪಿಸಿದ್ದು, ಸಬಿತಾ ಕಲ್ಯಾಣ್‌ಪುರ್ಕರ್ ಮತ್ತು ವಿನೋದ್ ಕಲ್ಯಾಣ್‌ಪುರ್ಕರ್ ಅವರ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ.
ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಈಚೆಗೆ ವೇದಶ್ರೀ ಕಲಾ ಸಂಗಮ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಉತ್ಸವ ಮತ್ತು ಪ್ರದರ್ಶನ ಮತ್ತು ದೃಶ್ಯ ಕಲೆಗಳ ಸ್ಪರ್ಧೆ– ‘ಕೌಶಿಕಿ 2025’- ಸೀಸನ್ 2ರಲ್ಲಿ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳು ಕಥಕ್‌ನಲ್ಲಿ ಮೂರು ಬಹುಮಾನಗಳನ್ನು ಪಡೆದುಕೊಂಡರು.
ಕೌಶಿಕಿ ನಾಡಕರ್ಣಿ ಸಬ್-ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ. ಸುದೀಕ್ಷಾ ಹೊಸಮನಿ ಜೂನಿಯರ್ ವಿಭಾಗದಲ್ಲಿ ಎರಡನೇ ಬಹುಮಾನ. ಚಂದನಾ ಹೊಸೂರ್ ಹಿರಿಯ ವಿಭಾಗದಲ್ಲಿ ಮೂರನೇ ಬಹುಮಾನ ಪಡೆದುಕೊಂಡರು.
ಇದೇ ವೇಳೆ ಅಕಾಡೆಮಿಯ ಗುರು ಧೀರಜ್ ಗಜ್ಭಿಯೆ ಅವರಿಗೆ ‘ಗುರು ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುಣೆಯ ಪಂಡಿತ್ ಭೀಮಸೇನ ಜೋಶಿ ಕಲಾಮಂದಿರದಲ್ಲಿ ಅಖಿಲ್ ನಟರಾಜಮ್ ಅನಂತ ಸಾಂಸ್ಕೃತಿಕ ಸಂಘವು ಡಿ.28ರಿಂದ 31ರವರೆಗೆ ಆಯೋಜಿಸಿದ್ದ ಅಖಿಲ ಭಾರತ 20ನೇ ಸಾಂಸ್ಕೃತಿಕ ರಾಷ್ಟ್ರೀಯ ನೃತ್ಯ ಸ್ಪರ್ಧೆ ‘ನೃತ್ಯ ದರ್ಪಣ್ 2025’ ಕಾರ್ಯಕ್ರಮದಲ್ಲಿಯೂ ಉತ್ತಮ ಸಾಧನೆ ಮಾಡಿದೆ.
ಕಥಕ್ ನೃತ್ಯ ಕಲಾ ಕೇಂದ್ರವು ಮುಕ್ತ ವಿಭಾಗದಲ್ಲಿ (ಭಾರತೀಯ ಜಾನಪದ/ಗುಂಪು) ಪ್ರಥಮ ಬಹುಮಾನ ಪಡೆದುಕೊಂಡಿದೆ. ಗುಂಪಿನಲ್ಲಿ ಪ್ರತಿಷ್ಠಾ ಶಾಸ್ತ್ರಿ, ಸಾನ್ವಿಕಾ ದೇಶಪಾಂಡೆ, ರೇಣುಕಾ ಸುಚೀಂದ್ರ, ಶ್ರೀರಂಜಿನಿ ವಿಶ್ವಾಸ್, ಕೀರ್ತಿ ಪೂಜಾರ್, ಐಶ್ವರ್ಯ ಅಯಾಚಿತ್, ಮೀನಾ ಶೆಟ್ಟಿ, ಬಂದಾನ ಸಿಂಗ್, ಶ್ವೇತಾ ಕುಮಾರಿ ಮತ್ತು ಅಪೂರ್ವ ಅಯಾಚಿತ್ ಇದ್ದರು.
ಸೋಲೋ ವಿಭಾಗದಲ್ಲಿ ಭಾವನಾ ಗಾಯಕ್ವಾಡ್ ಕಥಕ್ ಸೋಲೋ - ಓಪನ್ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಜಾನಪದ ಯುಗಳ ವಿಭಾಗದಲ್ಲಿ ಬಂದಾನ ಸಿಂಗ್ ಮತ್ತು ಶ್ವೇತಾ ಕುಮಾರಿ ದ್ವಿತೀಯ ಬಹುಮಾನ ಪಡೆಕೊಂಡಿದ್ದಾರೆ.
ಇದೇ ವೇಳೆ ಧೀರಜ್ ಗಜಭಿಯೆ ಅವರಿಗೆ ‘ನೃತ್ಯ ಆವಿಷ್ಕಾರ್’ (ಅತ್ಯುತ್ತಮ ನೃತ್ಯ ಸಂಯೋಜನೆ) ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ನೃತ್ಯ ಕಲಾ ಕೇಂದ್ರದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.