
ಪ್ರಜಾವಾಣಿ ವಾರ್ತೆ
ಸಂಗ್ರಹ ಚಿತ್ರ
ಧಾರವಾಡ: ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಾಳಾಪುರದ ಗುಬ್ಬಚ್ಚಿ ಗೂಡು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.17ರಂದು ‘ಚಿಲಿಪಿಲಿ ಮಕ್ಕಳ ಗಾಳಿಪಟ ಹಬ್ಬ’ ನಡೆಯಲಿದೆ.
ಬೆಳಿಗ್ಗೆ 9 ರಿಂದ 11 ಗಂಟೆವರೆಗೆ ಗಾಳಿಪಟ ಹಬ್ಬ ನಡೆಯಲಿದೆ. 17 ವರ್ಷದೊಳಗಿನ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಇದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ₹2,000, ದ್ವಿತೀಯ ₹1,000 ಮತ್ತು ತೃತೀಯ ₹500 ಬಹುಮಾನ ನೀಡಲಾಗುವುದು. ಹೆಸರು ನೋಂದಾಯಿಸಲು ಮತ್ತು ಮಾಹಿತಿಗಾಗಿ ಮೊ:9743250624 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.