ಹುಬ್ಬಳ್ಳಿ: ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರವು (ಜೆಎನ್‌ಸಿಎಎಸ್‌ಆರ್) ಇಲ್ಲಿಯ ಬಿವಿಬಿ ಕಾಲೇಜಿನಲ್ಲಿ ಮಂಗಳವಾರ ಸಂಶೋಧನಾ ಸಹಯೋಗಕ್ಕಾಗಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದವು.
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಪಿ.ಜಿ. ತಿವಾರಿ ಮತ್ತು ಜೆಎನ್‌ಸಿಎಎಸ್‌ಆರ್ ಅಧ್ಯಕ್ಷ ಪ್ರೊ. ಜಿ.ಯು. ಕುಲಕರ್ಣಿ ಅವರು ಸಹಿ ಹಾಕಿ ಒಪ್ಪಂದ ಮಾಡಿಕೊಂಡರು.
ಪ್ರೊ. ಜಿ.ಯು. ಕುಲಕರ್ಣಿ ಮಾತನಾಡಿ, ‘ಹೊಸ ಒಪ್ಪಂದದ ಅನ್ವಯ ಕೆಎಲ್‌ಇ ಟೆಕ್ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಜೆಎನ್‌ಸಿಎಎಸ್‌ಆರ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ನಮ್ಮ ಕೇಂದ್ರದ ಸಂಶೋಧಕರನ್ನು ಮತ್ತು ವಿದ್ಯಾರ್ಥಿಗಳನ್ನು ಸಹ ಇಲ್ಲಿಗೆ ಕಳುಹಿಸುತ್ತೇವೆ. ಪ್ರೊ. ಅಶೋಕ ಶೆಟ್ಟರ್ ಮತ್ತು ಅವರ ತಂಡದ ದೃಷ್ಟಿಕೋನದಡಿ ಕೆಎಲ್‌ಇ ನವೀನತೆ ಮತ್ತು ಶ್ರೇಷ್ಠತೆಯ ಕಡೆಗೆ ಹೆಜ್ಜೆ ಹಾಕುತ್ತಿರುವುದು ಮೆಚ್ಚುಗೆಯ ಸಂಗತಿ’ ಎಂದರು.
ಕೆಎಲ್‌ಇ ಟೆಕ್ ಪ್ರೊ-ಚಾನ್ಸಲರ್ ಪ್ರೊ. ಅಶೋಕ ಶೆಟ್ಟರ್ ಮಾತನಾಡಿ, ‘ಜೆಎನ್‌ಸಿಎಎಸ್‌ಆರ್ ಶ್ರೇಷ್ಠ ವೈಜ್ಞಾನಿಕ ಸಂಶೋಧನೆಗೆ ಒತ್ತು ನೀಡುತ್ತದೆ. ಒಪ್ಪಂದದಿಂದ ಉಭಯ ಸಂಸ್ಥೆಗಳಿಗೂ ಪ್ರಯೋಜನವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.