ADVERTISEMENT

ತಾಂತ್ರಿಕ ಕೌಶಲ ಮೆರೆದ ಯೂರೊ ರೇಸಿಂಗ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:28 IST
Last Updated 4 ಮಾರ್ಚ್ 2026, 6:28 IST
ಹೈದರಾಬಾದ್‌ನ ನರಸಾಪುರದ ಬಿವಿಆರ್‌ಐಟಿ ಅಲ್ಲಿ ಈಚೆಗೆ ನಡೆದ ಎಂ–ಬಿಎಜೆಎ ಎಸ್ಎಇ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನೊಳ ‘ಯೂರೊ ರೇಸಿಂಗ್’ ತಂಡ
ಹೈದರಾಬಾದ್‌ನ ನರಸಾಪುರದ ಬಿವಿಆರ್‌ಐಟಿ ಅಲ್ಲಿ ಈಚೆಗೆ ನಡೆದ ಎಂ–ಬಿಎಜೆಎ ಎಸ್ಎಇ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನೊಳ ‘ಯೂರೊ ರೇಸಿಂಗ್’ ತಂಡ   

ಹುಬ್ಬಳ್ಳಿ: ಹೈದರಾಬಾದ್‌ನ ನರಸಾಪುರದ ಬಿವಿಆರ್‌ಐಟಿ ಅಲ್ಲಿ ಈಚೆಗೆ ಮುಕ್ತಾಯಗೊಂಡ ಎಂ–ಬಿಎಜೆಎ ಎಸ್ಎಇ ಇಂಡಿಯಾ ಸ್ಪರ್ಧೆಯಲ್ಲಿ ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನೊಳಗೊಂಡ ‘ಯೂರೊ ರೇಸಿಂಗ್’ ತಂಡವು ಅಖಿಲ ಭಾರತ ಶ್ರೇಯಾಂಕದಲ್ಲಿ 2ನೇ ಸ್ಥಾನ ಪಡೆದಿದೆ.

‍‘ತಂಡ ತಯಾರಿಸಿದ ಆಂತರಿಕ ದಹನಕಾರಿ ಎಂಜಿನ್ ಆಫ್-ರೋಡ್ ವಾಹನವು ಅಸಾಧಾರಣ ಕಾರ್ಯಕ್ಷಮತೆ, ತಾಂತ್ರಿಕ ತಪಾಸಣೆ, ಬ್ರೇಕ್ ಪರೀಕ್ಷೆ, ವೇಗವರ್ಧನೆ, ಸ್ಲೆಡ್ ಪುಲ್, ಕುಶಲ ಪರೀಕ್ಷೆ ಮತ್ತು 4 ಗಂಟೆಗಳ ಕಠಿಣ ಸಹಿಷ್ಣುತೆ ರೇಸ್ ಸೇರಿದಂತೆ ಎಲ್ಲ ಸುತ್ತುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ’ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಸಹಿಷ್ಣುತೆ ಪರೀಕ್ಷೆಯಲ್ಲಿ ಈ ವಾಹನವು ಮೊದಲ ಸ್ಥಾನ ಪಡೆದುಕೊಂಡಿದೆ. ತಂಡವು ರಾಷ್ಟ್ರಮಟ್ಟದ ಅತ್ಯುತ್ತಮ ಪ್ರದರ್ಶನಕ್ಕಾಗಿ ₹1.60 ಲಕ್ಷ ನಗದು ಬಹುಮಾನ ಪಡೆದುಕೊಂಡಿದೆ. ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಶಾಖೆಗಳ ಒಟ್ಟು 18 ವಿದ್ಯಾರ್ಥಿಗಳು ತಂಡದಲ್ಲಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT