ADVERTISEMENT

ಕೆಪಿಎಲ್ ಫಿಕ್ಸಿಂಗ್: ಆಟಗಾರರ ಸಾಮಾಜಿಕ ತಾಣಗಳ ಮಾಹಿತಿ‌ ಕೋರಿದ ಸಿಸಿಬಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 11:27 IST
Last Updated 28 ನವೆಂಬರ್ 2019, 11:27 IST
ಕೆಪಿಎಲ್‌
ಕೆಪಿಎಲ್‌   

ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ತಂಡಗಳ ಮಾಲೀಕರಿಗೆ ಸಿಸಿಬಿ ಪೊಲೀಸರು ಬುಧವಾರ ಮತ್ತೊಂದು ನೋಟಿಸ್ ನೀಡಿದ್ದು, ಆಟಗಾರರ ಪಾನ್ ಕಾರ್ಡ್, ಫೇಸ್‌ಬುಕ್‌ ಖಾತೆಗಳ ಮಾಹಿತಿ‌ ನೀಡುವಂತೆ ಸೂಚಿಸಿದ್ದಾರೆ.

‘ತಮ್ಮ ತಂಡದಲ್ಲಿ ಆಡುತ್ತಿರುವ ಆಟಗಾರರ ಇನ್‌ಸ್ಟಾಗ್ರಾಮ್ ಖಾತೆಯ ಬಗ್ಗೆಯೂ ಮಾಹಿತಿ ಕೊಡಬೇಕು. 2018/19ನೇ ಸಾಲಿನಲ್ಲಿ ನಡೆದ ಕೆಪಿಎಲ್ ಪಂದ್ಯಗಳ ಅವಧಿಯಲ್ಲಿ ಆಟಗಾರರಿಗೆ ಎಲ್ಲೆಲ್ಲಿ ಔತಣ ಕೂಟಗಳನ್ನು ಎರ್ಪಡಿಸಲಾಗಿತ್ತು. ಆಯಾ ಔತಣ ಕೂಟಗಳ ಸಂಪೂರ್ಣ ವಿಡಿಯೊ ದಾಖಲೆ ನೀಡಬೇಕು’ ಎಂದು ತಿಳಿಸಿದ್ದಾರೆ.

‘ಕೆಪಿಎಲ್ ಟೂರ್ನಿಗೆ ಹರಾಜಿನ ಮೂಲಕ ಆಯ್ಕೆ ಮಾಡಿಕೊಂಡ ಆಟಗಾರರು ಹಾಗೂ ಸಿಬ್ಬಂದಿಯ ಮಾಹಿತಿ, 2018 ಹಾಗೂ 2019ರ ಟೂರ್ನಿಯ ವೇಳೆ ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ನ ಮಾಹಿತಿ, ಹೋಟೆಲ್ ನಲ್ಲಿ ಆಟಗಾರರ ಖರ್ಚು ವೆಚ್ಚಗಳನ್ನು ಯಾರು ನೋಡಿಕೊಳ್ಳುತ್ತಿದ್ದರು, ವೆಚ್ಚವಾದ ಖರ್ಚು ಎಷ್ಟು? ಎನ್ನುವುದರ ಬಗ್ಗೆಯೂ ತುರ್ತಾಗಿ‌ ಮಾಹಿತಿ ಕೊಡಬೇಕು’ ಎಂದು ಪೊಲೀಸರು ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.