ADVERTISEMENT

ಸಾರಿಗೆ ನೌಕರರ ಮುಷ್ಕರವನ್ನು ಕುತಂತ್ರ‌ ವ್ಯಕ್ತಿಗಳ ಷಡ್ಯಂತ್ರ ಎಂದ ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 7:50 IST
Last Updated 9 ಏಪ್ರಿಲ್ 2021, 7:50 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಹುಬ್ಬಳ್ಳಿ : ಸಾರಿಗೆ ಮುಷ್ಕರ ಕೆಲ ಕುತಂತ್ರ ವ್ಯಕ್ತಿಗಳ ಷಡ್ಯಂತ್ರ. ತಾವು ಹಿಂದೆ ಇದ್ದುಕೊಂಡು ಸಾರಿಗೆ ನೌಕರರನ್ನು ಮುಂದೆ ಬಿಟ್ಡಿದ್ದಾರೆ ಎಂದು ‌ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ‌ ಮಾತನಾಡಿದ ‌ಅವರು, 'ಸಾರಿಗೆ ಸಂಸ್ಥೆ ನಿಗಮವಾಗಿದ್ದು,ರಾಜ್ಯದಲ್ಲಿ ಈ ರೀತಿಯ 116 ನಿಗಮಳಿವೆ. ಇವರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದರೆ ಉಳಿದವರೂ ಹೋರಾಟ ಮಾಡುತ್ತಾರೆ. ಅವರನ್ನೆಲ್ಲ‌ ಸರ್ಕಾರಿ ನೌಕರರು ಎಂದು ಪರಿಗಣಿಸಿದರೆ, ಬಜೆಟ್ ಹಣವನ್ನೆಲ್ಲ ಅವರಿಗೆ ನೀಡಬೇಕಾಗುತ್ತದೆ' ಎಂದರು

ಕೊರೊನಾ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸರಿಯಲ್ಲ. ಮುಷ್ಕರ ಕೈಬಿಡಿ. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.