ADVERTISEMENT

ಶಿಶುನಾಳ ಜಾತ್ರೆಗೆ ಕುಂದಗೋಳ ಬಂಡಿ: ಅಭಿನವ ಬಸವಣ್ಣಜ್ಜನವರು ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:13 IST
Last Updated 26 ಫೆಬ್ರುವರಿ 2026, 6:13 IST
ಕುಂದಗೋಳದಿಂದ ಶಿಶುನಾಳ ಜಾತ್ರೆಗೆ ತೆರಳುವ ನೂತನ ಬಂಡಿ ತಯಾರಿಸಿದ ಬಡಿಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಕುಂದಗೋಳದಿಂದ ಶಿಶುನಾಳ ಜಾತ್ರೆಗೆ ತೆರಳುವ ನೂತನ ಬಂಡಿ ತಯಾರಿಸಿದ ಬಡಿಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು   

ಕುಂದಗೋಳ: ಶಿಶುನಾಳಕ್ಕೂ ಕುಂದಗೋಳಕ್ಕೂ ಅವಿನಾಭಾವ ಸಂಭದವಿದೆ. ಶರೀಫಜ್ಜನ ಜಾತ್ರೆಗೆ ಬಂಡಿ ತೆಗೆದುಕೊಂಡು ಹೊಗುವ ಸಂಪ್ರದಾಯವನ್ನು ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಮಾಡುತ್ತಿರುವ ಕಾರ್ಯ ಶ್ಲಾಘನಿಯವಾಗಿದೆ ಎಂದು ಕಲ್ಯಾಣಪುರ ಅಭಿನವ ಬಸವಣ್ಣಜ್ಜನವರು ಹೇಳಿದರು.

ಪಟ್ಟಣದ ಗಣಪತಿ ದೇವಸ್ಥಾನದಿಂದ ಶಿಶುನಾಳ ಜಾತ್ರೆಗೆ ತೆರಳುವ ಬಂಡಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.

ನೂತನ ಬಂಡಿ ತಯಾರಿಸಿದ ಬಡಿಗೇರ ಹಾಗೂ ಸಹಾಯ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಅರವಿಂದ ಕಟಗಿ, ಅರ್ಜುನ ನಾಡಗೀರ, ಮಲ್ಲಿಕಾರ್ಜುನ ಬಾಳಿಕಾಯಿ, ನಾಗರಾಜ ದೇಶಪಾಂಡೆ, ವಾಯ್.ಎಮ್. ತಹಶಿಲ್ದಾರ, ರಾಜಣ್ಣ ದೇಸಾಯಿ, ಶಂಕ್ರಣ್ಣ ಗೌರಿ, ಬಾಬಾಜಾನ ಮಿಶ್ರಿಕೋಟಿ, ಸಲಿಂ ಕಡ್ಲಿ ಮತ್ತಿತರಿದ್ದರು. ಬಸವರಾಜ ಗೌರಿ ನಿರೂಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.