ADVERTISEMENT

ಕಲಘಟಗಿ | ಕರಡಿ ಗುಡ್ಡದಲ್ಲಿ ಚಿರತೆ ಹೆಜ್ಜೆ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 15:31 IST
Last Updated 30 ಮೇ 2024, 15:31 IST
ಕಲಘಟಗಿ ತಾಲ್ಲೂಕಿನ ಗುಡ್ಡದ ಹುಲಕಟ್ಟಿ ಹೊರವಲಯದಲ್ಲಿ ಚಿರತೆಗಳು ಕಾಣಿಸಿಕೊಂಡಿವೆ ಎನ್ನಲಾದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು
ಕಲಘಟಗಿ ತಾಲ್ಲೂಕಿನ ಗುಡ್ಡದ ಹುಲಕಟ್ಟಿ ಹೊರವಲಯದಲ್ಲಿ ಚಿರತೆಗಳು ಕಾಣಿಸಿಕೊಂಡಿವೆ ಎನ್ನಲಾದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು   

ಕಲಘಟಗಿ: ತಾಲ್ಲೂಕಿನ ಗುಡ್ಡದ ಹುಲಕಟ್ಟಿ ಗ್ರಾಮದ ಹೊರವಲಯದಲ್ಲಿ ಚಿರತೆಗಳು ಕಾಣಿಸಿಕೊಂಡಿವೆ ಎಂದು ರೈತರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದ ಹೊರವಲಯದ ಕರಡಿ ಗುಡ್ಡದಲ್ಲಿ ಚಿರತೆಗಳು ಹೋಗುತ್ತಿರುವುದನ್ನು ಕಂಡಿದ್ದೇವೆ ಎಂದು ರೈತರು ಮಾಹಿತಿ ನೀಡಿದ್ದರು.

‘ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ಸ್ಥಳದಲ್ಲಿ ಹೆಜ್ಜೆ ಗುರುತುಗಳು ಪತ್ತೆ ಆಗಿವೆ. ಆದರೆ ಅವು ಚಿರತೆಗಳಿದ್ದೇ ಎಂದು ಸ್ಪಷ್ಟವಾಗಿಲ್ಲ. ಬೇರೆ ಕಾಡುಪ್ರಾಣಿಗಳದ್ದೂ ಇರಬಹುದು’ ಎಂದು ಉಪ ವಲಯ ಅರಣ್ಯಾಧಿಕಾರಿ ಮುತ್ತು ಛಲವಾದಿ, ಅರಣ್ಯ ಪಾಲಕ ಮೋಸಿನ್ ಡಿ. ಗ್ರಾಮಸ್ಥರಿಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.