ಕುಂದಗೋಳ: ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಶನಿವಾರ, ಸ್ಥಳೀಯ ಜೆಎಂಎಫ್‌ಸಿ ಹಿರಿಯ ನ್ಯಾಯಾಲಯದಲ್ಲಿ 563 ಹಾಗೂ ಸಿವಿಲ್ ನ್ಯಾಯಾಲಯದಲ್ಲಿದ್ದ 152 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮೂರು ಪ್ರಕರಣಗಳಲ್ಲಿ ಪತಿ, ಪತ್ನಿ ರಾಜಿಯಾಗಿ, ಮತ್ತೆ ಒಂದಾಗಿದ್ದಾರೆ. ಅವರಿಗೆ ನ್ಯಾಯಾಲಯದಲ್ಲಿ ಮಾಲೆ ಹಾಕಿಸಲಾಯಿತು. ವಯಸ್ಸಾದ ಕಕ್ಷಿದಾರ ಇರುವಲ್ಲಿಗೆ ನ್ಯಾಯಾಧೀಶರೇ ತೆರಳಿದ್ದು ವಿಷೇಶವಾಗಿತ್ತು.
ನ್ಯಾಯಾಧೀಶರಾದ ಅಬ್ದುಲ್ ಖಾದರ್ ಹಾಗೂ ಗಾಯತ್ರಿ ಅವರು ಕೆಲ ವಿಶೇಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಜೊತೆಗೆ ಬಹುವರ್ಷಗಳಿಂದ ಮುಂದುವರಿದಿದ್ದ ಬ್ಯಾಂಕ್ ಸೂಟ್, ಎಂ.ವಿ.ಸಿ. ಅಸಲು ದಾವಾ, ಎಫ್.ಡಿ.ಪಿ ಪ್ರಕರಣಗಳಲ್ಲಿ ₹87.53 ಲಕ್ಷ ವ್ಯವಹಾರ ಸಂಧಾನದ ಮೂಲಕ ಇತ್ಯರ್ಥಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.