ADVERTISEMENT

ಲೋಕಾ ದಾಳಿ: PWD ಉತ್ತರ ವಲಯ ಮುಖ್ಯ ಎಂಜಿನಿಯರ್ ಸುರೇಶ್‌ ಬಳಿ ಅಪಾರ ಆಸ್ತಿ ಪತ್ತೆ

ಲೋಕೋಪಯೋಗಿ ಇಲಾಖೆ (ಉತ್ತರ ವಲಯ) ಮುಖ್ಯ ಎಂಜಿನಿಯರ್‌ ಎಚ್‌.ಸುರೇಶ್‌ ಅವರ ಕಚೇರಿ, ಸರ್ಕಾರಿ ವಸತಿ ಗೃಹಕ್ಕೆ ಲೋಕಾಯುಕ್ತ ತಂಡ ದಾಳಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 12:59 IST
Last Updated 31 ಮೇ 2025, 12:59 IST
<div class="paragraphs"><p>H.ಸುರೇಶ್‌</p></div>

H.ಸುರೇಶ್‌

   

ಧಾರವಾಡ: ಲೋಕೋಪಯೋಗಿ ಇಲಾಖೆ (ಉತ್ತರ ವಲಯ) ಮುಖ್ಯ ಎಂಜಿನಿಯರ್‌ ಎಚ್‌.ಸುರೇಶ್‌ ಅವರ ಕಚೇರಿ, ಸರ್ಕಾರಿ ವಸತಿ ಗೃಹಕ್ಕೆ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ₹ 3.31 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಬೆಳಿಗ್ಗೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕೆಸಿಡಿ ವೃತ್ತದ ಸಮೀಪದಲ್ಲಿನ ಪಿಡಬ್ಲ್ಯುಡಿ ವಸತಿ ಗೃಹ ಮತ್ತು ಡಿ.ಸಿ ಕಂಪೌಂಡದಲ್ಲಿನ ಕಚೇರಿಯಲ್ಲಿ ಶೋಧ ಮಾಡಿದ್ದಾರೆ. ಗದಗ ಮತ್ತು ಬೆಳಗಾವಿ ಜಿಲ್ಲೆಯ ಮನೆ, ಫಾರ್ಮ್‌ಹೌಸ್‌ನಲ್ಲೂ ಶೋಧ ನಡೆಸಿದ್ಧಾರೆ.

ADVERTISEMENT

ಮನೆಯಲ್ಲಿ ₹ 76ಸಾವಿರ ನಗದು, 245 ಗ್ರಾಂ (₹ 21.58 ಲಕ್ಷ) ಚಿನ್ನಾಭರಣ, 2.5 ಕೆ.ಜಿ(₹ 2.4 ಲಕ್ಷ) ಬೆಳ್ಳಿ, ಎರಡು ಕಾರು (₹ 26 ಲಕ್ಷ), ₹ 25 ಲಕ್ಷ ಮೌಲ್ಯದ ಪೀಠೋಪಕರಣ ಪತ್ತೆಯಾಗಿದೆ. ಒಂದ ಮನೆ ಮತ್ತು ಒಂದು ಫಾರ್ಮ್ ಹೌಸ್‌ (₹ 2.60 ಕೋಟಿ), 11.35 ಎಕರೆ ಕೃಷಿ ಜಮೀನು (₹ 35.36 ಲಕ್ಷ), ಎರಡು ನಿವೇಶನ (₹ 13.44 ಲಕ್ಷ ), ಆರು ವಾಣಿಜ್ಯ ಮಳಿಗೆ (₹ 50.55 ಲಕ್ಷ), ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.