ADVERTISEMENT

ಮಾತೃಭಾಷೆ ಪ್ರೀತಿಸಿ, ಇತರ ಭಾಷೆಗಳ ಗೌರವಿಸಿ: ಸಂದೀಪ ಬೂದಿಹಾಳ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 15:15 IST
Last Updated 21 ಫೆಬ್ರುವರಿ 2022, 15:15 IST
ಹುಬ್ಬಳ್ಳಿಯ ಸರ್ಕಾರಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಕನಕದಾಸ ಮಹಾವಿದ್ಯಾಲಯದ ಪ್ರಾಚಾರ್ಯ ಸಂದೀಪ ಬೂದಿಹಾಳ ಮಾತನಾಡಿದರು
ಹುಬ್ಬಳ್ಳಿಯ ಸರ್ಕಾರಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಕನಕದಾಸ ಮಹಾವಿದ್ಯಾಲಯದ ಪ್ರಾಚಾರ್ಯ ಸಂದೀಪ ಬೂದಿಹಾಳ ಮಾತನಾಡಿದರು   

ಹುಬ್ಬಳ್ಳಿ: ‘ಮನುಷ್ಯನ ಹುಟ್ಟಿನ ಜೊತೆಗೆ ಬಂದ ಭಾಷೆಯೇ ಮಾತೃಭಾಷೆ. ನಮ್ಮ ಮಾತೃಭಾಷೆ ಜೊತೆಗೆ ಇತರ ಭಾಷೆಗಳನ್ನು ಕಲಿತು ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು’ ಎಂದು ಕನಕದಾಸ ಮಹಾವಿದ್ಯಾಲಯದ ಪ್ರಾಚಾರ್ಯ ಸಂದೀಪ ಬೂದಿಹಾಳ ಹೇಳಿದರು.

ಹಳೇ ಹುಬ್ಬಳ್ಳಿಯ ಸರ್ಕಾರಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಎಲ್ಲಾ ಭಾಷೆಗಳಿಗೂ ತಮ್ಮದೇ ಆದ ಇತಿಹಾಸದೊಂದಿಗೆ ಶ್ರೀಮಂತಿಕೆಯೂ ಇರುತ್ತದೆ. ಮಾತೃಭಾಷೆಯನ್ನು ಪ್ರೀತಿಸುತ್ತಲೇ, ಇತರ ಭಾಷೆಗಳನ್ನು ಗೌರವಿಸಬೇಕು. ಭಾಷೆಗಳ ಕಲಿಕೆಯಿಂದ ನಮ್ಮ ಜ್ಞಾನ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ’ ಎಂದರು.

ಪ್ರಾಧಿಕಾರದ ಸದಸ್ಯ ಹಾಗೂ ಜಾನಪದ ಕಲಾವಿದ ಡಾ. ರಾಮು ಮೂಲಗಿ ಅವರು, ಹಾಡುಗಳ ಮೂಲಕ ಭಾಷೆಯ ಮಹತ್ವವನ್ನು ತಿಳಿಸಿದರು. ಶಾಲೆಯ ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ತೋಟಪ್ಪ ನಿಡಗುಂದಿ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಮುಖ್ಯ ಶಿಕ್ಷಕ ಎಚ್.ಎಂ. ಕುಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧಿಕಾರದ ಸದಸ್ಯರಾದ ನಾಟಕಕಾರ ಗದಗಯ್ಯ ಹಿರೇಮಠ, ನಾರಾಯಣ ಪಾಂಡುರಂಗಿ, ರವಿ ಬಂಕಾಪುರ, ಶಿವಾನಂದ ಅದರಗುಂಚಿ, ದಾಕ್ಷಾಯಣಿ ಭಂಡಾರಿ, ವಿದ್ಯಾ ಮಡಿವಾಳರ, ಲಕ್ಷ್ಮಣ ಹೊಸಮನಿ, ಪರ್ವೀನ್ ಸಂಪಗಾವ್, ಭಾಗ್ಯಶ್ರೀ ಶಿರಲ್ಕರ್ ಹಾಗೂ ಲತಾ ಚುಳಕಿ ಇದ್ದರು. ಶಕೀಲಾ ಗ್ಲೇಡಿಸ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.