ADVERTISEMENT

ಮಧ್ವಾಚಾರ್ಯರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 15:35 IST
Last Updated 29 ಜನವರಿ 2023, 15:35 IST
ಹುಬ್ಬಳ್ಳಿಯ ಜೆ.ಸಿ. ನಗರದ ರಾಜಯೋಗ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಮಧ್ವಾಚಾರ್ಯರ ಮಹೋತ್ಸವದಲ್ಲಿ ಕಂಠಪಲ್ಲಿ ಆಚಾರ್ಯರು ಮಾತನಾಡಿದರು
ಹುಬ್ಬಳ್ಳಿಯ ಜೆ.ಸಿ. ನಗರದ ರಾಜಯೋಗ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಮಧ್ವಾಚಾರ್ಯರ ಮಹೋತ್ಸವದಲ್ಲಿ ಕಂಠಪಲ್ಲಿ ಆಚಾರ್ಯರು ಮಾತನಾಡಿದರು   

ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದ ರಾಜಯೋಗ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಭಾನುವಾರ ಮಧ್ವಾಚಾರ್ಯರ ಮಹೋತ್ಸವ ಆಯೋಜಿಸಲಾಗಿತ್ತು.

ವೇದ ಪೀಠದ ಅಧ್ಯಕ್ಷ ಕಂಠಪಲ್ಲಿ ಆಚಾರ್ಯರು ಮಾತನಾಡಿ, ‘ಭಕ್ತಿಯಿಂದ ಮೋಕ್ಷ, ಮುಕ್ತಿ ಸಿಗುತ್ತದೆ. ಮೋಕ್ಷ ಎಂದರೆ ದುಃಖದಿಂದ ಬಿಡುಗಡೆ ಹೊಂದುವುದು ಎಂದು ಮದ್ವಾಚಾರ್ಯರು ತಿಳಿಸಿದ್ದಾರೆ’ ಎಂದು ಹೇಳಿದರು.

ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಗೌರವ ಉಪಾಧ್ಯಕ್ಷ ಹನುಮಂತ ಕೊಟಬಾಗಿ ಮಾತನಾಡಿ, ‘ವಿಶ್ವಗುರು ಮಧ್ವಾಚಾರ್ಯರ ಮಹೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ’ ಎಂದರು.

ADVERTISEMENT

ಪ್ರಕಾಶ ಶೇಟ್ ಮಾತನಾಡಿ, ‘ನೆಮ್ಮದಿಯ ಜೀವನಕ್ಕೆ ಅಧ್ಯಾತ್ಮ ಬಹಳ ಅವಶ್ಯ. ಇಂತಹ ಅಧ್ಯಾತ್ಮದ ಮಹತ್ವ ಸಾರುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

‌ಆನಂದ ವಿಷ್ಣು ಮಮದಾಪುರ ಅವರು, ಮಧ್ವಾಚಾರ್ಯರ ಐದು ತತ್ವಗಳ ಬಗ್ಗೆ ತಿಳಿಸಿದರು. ನಿರ್ಮಲ ಅಕ್ಕ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.