ADVERTISEMENT

ಮಹದಾಯಿ: ಅರವಿಂದ ಬೆಲ್ಲದ ಹೇಳಿಕೆ ಸಮಂಜಸವಲ್ಲ- ಜನಸೇವಾ ಸಂಘ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 5:38 IST
Last Updated 13 ಫೆಬ್ರುವರಿ 2026, 5:38 IST
<div class="paragraphs"><p>ಅರವಿಂದ ಬೆಲ್ಲದ</p></div>

ಅರವಿಂದ ಬೆಲ್ಲದ

   

– ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ‘ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಮಹದಾಯಿ ನೀರಿನ ಬಗ್ಗೆ ಸತ್ಯಾಂಶ ಅರಿಯದೇ ನೀಡಿದ ಹೇಳಿಕೆ ಸಮಂಜಸವಲ್ಲ’ ಎಂದು ಧಾರವಾಡ ಜಿಲ್ಲಾ ಜಯ ಭಾರತ ಜನಸೇವಾ ಸಂಘ ತಿಳಿಸಿದೆ.

ADVERTISEMENT

‘ಮಹದಾಯಿ ನ್ಯಾಯಾಧೀಕರಣ ರಾಜ್ಯಕ್ಕೆ 3.09 ಟಿಎಂಸಿ ಅಡಿ ಕುಡಿಯುವ ನೀರು ಪೂರೈಕೆಗೆ ಹಸಿರು ನಿಶಾನೆ ತೋರಿತ್ತು. ಆದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಪರವಾನಗಿ ಪಡೆಯಬೇಕು ಎಂಬ ಷರತ್ತು ವಿಧಿಸಿತ್ತು ಎಂದು ಬೆಲ್ಲದ ಹೇಳಿಕೆ ನೀಡಿದ್ದಾರೆ. ಆದರೆ ಈ ನ್ಯಾಯಾಧೀಕರಣ ಹಸಿರು ನಿಶಾನೆ ತೋರಿಸಿದಾಗ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇತ್ತು. ಗೋವಾದಲ್ಲಿಯೂ ನಿಮ್ಮ ಪಕ್ಷದ ಸರ್ಕಾರ ಇತ್ತು. ವನ್ಯಜೀವಿ ಮಂಡಳಿಗೆ ಒತ್ತಾಯ ಮಾಡಿ ಪರವಾನಗಿ ಪಡೆಯಬಹುದಿತ್ತು. ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸುವಾಗ ತಡೆಯಬಹುದಿತ್ತು. ಕೇಂದ್ರ ಪೂರ್ಣ ಪ್ರಮಾಣದ ಆಡಳಿತ ನಡೆಸುತ್ತಿರುವಾಗ ಅಸಹಾಯಕ ಎಂದು ಹೇಳಿಕೆ ನೀಡುವುದು ಸಮಂಜಸವಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಐ.ಎಂ.ತೋರಗಲ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕೂಡಲೇ  ಮಹಾದಾಯಿ ನೀರಿನ ಸಮಸ್ಯೆ ಬಗೆಹರಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.