ಹುಬ್ಬಳ್ಳಿ: ‘ವಿದ್ಯುತ್ ಮಗ್ಗಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡಿದರೆ, ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಬೋರಗಾಂವದಲ್ಲಿ ಜವಳಿ ಘಟಕಗಳನ್ನು ಸ್ಥಾಪಿಸುತ್ತೇವೆ’ ಎಂದು ಮಹಾರಾಷ್ಟ್ರದ ಜವಳಿ ಉದ್ಯಮಿದಾರರು ತಿಳಿಸಿದ್ದಾರೆ.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಹೇಂದ್ರ ಸಿಂಘಿ ನೇತೃತ್ವದಲ್ಲಿ ಗುರುವಾರ ಜವಳಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿಯಾದ ಉದ್ಯಮಿಗಳು, ‘ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಾಗಿದೆ. ಪ್ರತಿ ಯೂನಿಟ್‌ಗೆ ₹ 4ರಿಂದ ₹ 5 ಕಡಿಮೆ ಮಾಡಿದರೆ ಇಲ್ಲಿಯೂ ಉದ್ಯಮ ಸ್ಥಾಪಿಸುತ್ತೇವೆ’ ಎಂದರು.
ಉದ್ಯಮಿಗಳಾದ ಮದನಲಾಲ ಬೊಹರಾ ಸಹಕಾರಿ ಕ್ಲಬ್ ಜವಳಿ ವ್ಯಾಪಾರಿಗಳ ಸಂಘದ ಚೇರ್ಮನ್ ಗೌತಮ ಮುಥಾ, ನಿರ್ದೇಶಕ ರಮೇಶ ಜೈನ, ಶ್ರೀಕಾಂತ ಚಂಗೇಡಿಯಾ, ಜಯಂತಿ ಸಲೇಚ್ಚಾ, ದೀಪಕ ವೇದಮುತಾ, ದಿಲೀಪ ಕೋಠಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.