ADVERTISEMENT

ಧಾರವಾಡ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 8:24 IST
Last Updated 2 ಡಿಸೆಂಬರ್ 2025, 8:24 IST
   

ಧಾರವಾಡ: ಮಕ್ಕೆಜೋಳ ಖರೀದಿ ಕೇಂದ್ರಗಳನ್ನು ಇನ್ನೂ ಆರಂಭಿಸಿಲ್ಲ, ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಮಹಾನಗರ ಹಾಗೂ ಗ್ರಾಮೀಣ ರೈತ ಮೋರ್ಚಾ ಜಿಲ್ಲಾ ಘಟಕದವರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಮೆಕ್ಕೆ ಜೋಳ ಖರೀದಿಗೆ ನಿಗದಿಗೊಳಿಸಿರುವ ಮಾನದಂಡಗಳನ್ನು ಸಡಿಲಿಸಬೇಕು. ಬೆಳೆ ವಿಮೆ ಪಾವತಿಸಿದ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗಹಿಸಿದರು.

ಪಿ.ರಾಜೀವ,ಶಾಸಕ ಎಂ.ಆರ್.ಪಾಟೀಲ, ಲಿಂಗರಾಜ ಪಾಟೀಲ, ಸೀಮಾ ಮಸೂತಿ, ರಾಘವೇಂದ್ರಗೌಡ ಪಾಟೀಲ, ಈಶ್ವರಗೌಡ ಪಾಟೀಲ, ಶಂಕರ ಕುಮಾರ ದೇಸಾಯಿ, ಬಸವರಾಜ ಕುಂದಗೋಳ ಮಠ, ಶಶಿಮೌಳಿ ಕುಲಕರ್ಣಿ,ಸಂಜಯ ಕಪಟಕರ, ಸುರೇಶ ಬೆದರೆ, ಮಂಜುನಾಥ ಮಲ್ಲಿವಾಡ,ಮೋಹನ ರಾಮದುರ್ಗ ಪಾಲ್ಗೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.