
ಹುಬ್ಬಳ್ಳಿ: ನಗರದ ಯು ಮಾಲ್‌ನಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ನಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನದ 15ನೇ ಆವೃತ್ತಿಯ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ರೂಪದರ್ಶಿಗಳಾದ ದೇವಕಿ ಪವಾರ, ದಿವ್ಯಾ ನಾಯಕ, ಐಶ್ವರ್ಯ ಮಿಸ್ಕಿನ ಮತ್ತು ಸಂಜನಾ ಮಿಸ್ಕಿನ ಅವರು ಪ್ರದರ್ಶನ ಉದ್ಘಾಟಿಸಿದರು.
ಎಲ್ಲ ಚಿನ್ನ, ಅನ್‌ಕಟ್ ಮತ್ತು ರತ್ನಾಭರಣಗಳ ಮೇಲೆ ಮೇಕಿಂಗ್ ಶುಲ್ಕದಲ್ಲಿ ಶೇ 30 ರವರೆಗೆ ರಿಯಾಯಿತಿ ಹಾಗೂ ವಜ್ರದ ಮೌಲ್ಯದ ಮೇಲೆ ಶೇ 30 ರವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರಿಯಾಯಿತಿ 2026ರ ಜನವರಿ 18ರವರೆಗೆ ಇರಲಿದೆ.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮಲಬಾರ್ ಗೋಲ್ಡ್ ಮುಖ್ಯಸ್ಥ ಅಜ್ಮಲ್ ರೋಷನ್, ಅಕ್ಷಾಜ್ ಮನು, ಇಶಾಮ್ ಮಹಮ್ಮದ್, ಮಾರ್ಕೆಟಿಂಗ್ ವ್ಯವಸ್ಥಾಪಕ ಸಿರಾಜ ಮುಲ್ಲಾ, ಆನಂದ ಮ್ಯಾಳದ, ಶಶಿಕಲಾ ಚಂದನ್ನವರ, ವಿವೇಕ ಎ.ವಿ, ಸಮೀರ್ ಬ್ಯಾಹಟ್ಟಿ, ಶಾಜು ಪಿ.ವಿ, ವಿನಾಯಕ ಶಾನಭಾಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.