ADVERTISEMENT

ಮಾಮಲೇದೇಸಾಯಿ ಶೋಷಣೆ ಮುಕ್ತ ಮಾರುಕಟ್ಟೆಗಾಗಿ ಶ್ರಮಿಸಿದವರು: ಎಚ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 3:12 IST
Last Updated 14 ಜನವರಿ 2026, 3:12 IST
ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿದರು 
ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿದರು    

ಧಾರವಾಡ: ‘ರೈತರ ಶ್ರೇಯೋಭಿವೃದ್ಧಿಗೆ ಶೋಷಣೆ ಮುಕ್ತ ಮಾರುಕಟ್ಟೆ ನಿರ್ಮಾಣಕ್ಕಾಗಿ ಆರ್.ಬಿ.ಮಾಮಲೇದೇಸಾಯಿ ಅವರು ಶ್ರಮಿಸಿದರು‘ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಆರ್.ಬಿ.ಮಾಮಲೇದೇಸಾಯಿ ಅವರ ದತ್ತಿ ಉದ್ಘಾಟನೆ ಹಾಗೂ ‘ಶಿಕ್ಷಣ ಪ್ರೇಮಿ ಆರ್.ಬಿ. ಮಾಮಲೇದೇಸಾಯಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಿಂದೆ ಮಾರುಕಟ್ಟೆಯಲ್ಲಿ ರೈತರ ಬೆಳೆದ ಉತ್ಪನ್ನಗಳಿಗೆ ತಕ್ಕ ಬೆಲೆಗಳು ಸಿಗುತ್ತಿರಲಿಲ್ಲ. ಅಲ್ಲದೇ, ವ್ಯಾಪಾರಿಗಳು ತೂಕದಲ್ಲೂ ಮೋಸ ಮಾಡುತ್ತಿದ್ದರು. ಹೀಗೆ ಅನೇಕ ರೀತಿಯಾಗಿ ರೈತ ಮೇಲೆ ಶೋಷಣೆ ನಡೆಯುತ್ತಿದ್ದವು. ಇದನ್ನು ಮನಗಂಡು ಜೆ.ಎಚ್.ಪಟೇಲ್, ಎಂ.ಆರ್.ಪಾಟೀಲ, ಬಿ.ಜಿ.ಬಣಕಾರ ಮತ್ತು ಮಾಮಲೇದೇಸಾಯಿ ಅವರು ಕರ್ನಾಟಕ ನಿಯಂತ್ರಣ ಮಾರುಕಟ್ಟೆ ಸಮಿತಿ ಕಾಯ್ದೆಯಡಿ ಎಪಿಎಂಸಿ ಸ್ಥಾಪಿಸಲು ಶ್ರಮಿಸಿದರು’ ಎಂದು ಹೇಳಿದರು.

ADVERTISEMENT

‘ಯುವ ಜನಾಂಗಕ್ಕೆ ಆರ್.ಬಿ.ಮಾಮಲೇದೇಸಾಯಿ ಅವರ ಜೀವನ ಹಾಗೂ ಸಾಧನೆ ಪ್ರೇರಣೆ. ಅವರ ಹೆಸರಿನಲ್ಲಿ ದತ್ತಿ ಸ್ಥಾಪನೆ ಅರ್ಥಪೂರ್ಣ. ಮಾಮಲೇದೇಸಾಯಿ ಮುತ್ಸದ್ಧಿಗಳಾಗಿದ್ದರು. ಯುವಜನರೊಂದಿ ಬೆರೆಯುತ್ತಿದ್ದರು’ ಎಂದರು.

ಮಾಜಿ ಶಾಸಕರಾದ ಎ.ಬಿ.ದೇಸಾಯಿ, ಅಮೃತ ದೇಸಾಯಿ, ಕಲಬುರಗಿ ರಾಜ್ಯ ಕೃಷಿ ಮಾರಾಟ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಜಿ.ಕೆ.ವೆಂಕಟೇಶ, ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಶಂಕರ ಕುಂಬಿ ಶಿವಾನಂದ, ಭಾವಿಕಟ್ಟಿ, ಪ್ರೊ.ಶಶಿಧರ ತೋಡಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.