ಸಾದರ ಸ್ವೀಕಾರ
ಧಾರವಾಡ: ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್ ನೀಡುವ ‘ಶಾಂತರಂಗ’ ನಾಟಕಕಾರ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ₹ 15 ಸಾವಿರ ನಗದು ಮತ್ತು ಪ್ರಮಾಣಪತ್ರ ಒಳಗೊಂಡಿದೆ. ಮೆಚ್ಚುಗೆ ಪಡೆದ ಎರಡು ನಾಟಕಗಳಿಗೆ ಅಭಿನಯ ಭಾರತಿ ಸಂಸ್ಥೆಯಿಂದ ₹ 2,500 ಪ್ರೋತ್ಸಾಹಧನ ನೀಡಲಾಗುವುದು.
ಹಸ್ತಪ್ರತಿಗಳನ್ನು ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನ. ಇ–ಮೇಲ್ ಮೂಲಕ ಕಳುಹಿಸಬೇಕು. ಪ್ರಶಸ್ತಿ ಪುರಸ್ಕೃತ ಹಸ್ತಪ್ರತಿಯನ್ನು ಮನೋಹರ ಗ್ರಂಥಮಾಲಾದಿಂದ ಪ್ರಕಟಿಸಲಾಗುವುದು. ಮುಂದಿನ ವರ್ಷ ಜನವರಿ 15ರಂದು ನಡೆಯುವ ಸಕ್ಕರಿ ಬಾಳಾಚಾರ್ಯ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹನುಮೇಶ ಸಕ್ಕರಿ ತಿಳಿಸಿದ್ದಾರೆ.
ಮಾಹಿತಿಗೆ ಸಂಪರ್ಕ ದೂರವಾಣಿ ಸಂಖ್ಯೆ: 7204448186 ಅಥವಾ 9448901846. ಇ–ಮೇಲ್ ವಿಳಾಸ: sakribalacharya@gmail.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.