ADVERTISEMENT

ಹುಬ್ಬಳ್ಳಿ | ಸಾಮೂಹಿಕ ವಿವಾಹ: ವೈವಾಹಿಕ ಜೀವನಕ್ಕೆ ಕಾಲಿಟ್ಟ 31 ಜೋಡಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 15:36 IST
Last Updated 18 ಫೆಬ್ರುವರಿ 2024, 15:36 IST
ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಭಾನುವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು
ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಭಾನುವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು   

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ನವಯುಗ ಸಂಘಟನೆ ಆಶ್ರಯದಲ್ಲಿ ನಗರದ  ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಭಾನುವಾರ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮ ಜರುಗಿತು.

ಸಾಮೂಹಿಕ ವಿವಾಹದಲ್ಲಿ 31 ಜೋಡಿಗಳು, ಉಪನಯನದಲ್ಲಿ 8 ವಟುಗಳು ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುವ ಹುಬ್ಬಳ್ಳಿಯ ಯುವಕನೊಂದಿಗೆ ನಾಗಾಲ್ಯಾಂಡ್‌ ಯುವತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ವಿಶೇಷವಾಗಿತ್ತು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ವಧು–ವರರನ್ನು ಆಶೀರ್ವದಿಸಿದರು. 

ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ  ಅವರು, ‘ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ’ ಎಂದು ಹೇಳಿದರು.

ADVERTISEMENT

ನವಯುಗ ಸಂಘಟನೆ ಅಧ್ಯಕ್ಷ ಕೃಷ್ಣ ಗಂಡಾಳಿಕರ್, ಸುಭಾಸ್ ಸಿಂಗ್ ಜಮಾದಾರ್, ಆನಂದ ಗುರುಸ್ವಾಮಿ, ರಮೇಶ ಮಹಾದೇವಪ್ಪನವರ, ಬಿಜೆಪಿ ಮುಖಂಡರಾದ ಸಿದ್ದು ಮೊಗಲಿ ಶೆಟ್ಟರ್, ರವಿ ನಾಯಕ, ಸುಬ್ರಹ್ಮಣ್ಯಂ ಶಿರ್ಕೊಳ, ಪ್ರಭು ನವಲಗುಂದಮಠ, ರಾಜು ಜರ್ತಾರ್ಘರ, ಸಿದ್ದೇಶ ಕಬಾಡದ, ಶೇಖಪ್ಪ ಬೆಳಗಲಿ, ಕೃಷ್ಣ ಉಪ್ಪೇರ, ಸುಭಾಶ ಅಕಲಕೋಟಿ, ಅವಿನಾಶ ಹರಿವಾಣ, ಮಧು ನವಲೆ, ಸಂಗೀತಾ ಬದ್ದಿ, ಲೀಲಾವತಿ ಪಾಸ್ತೆ, ಸೀಮಾ ಲದ್ವಾ, ರೇಖಾ ಸರ್ಜನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.