ADVERTISEMENT

ಸರ್ವಧರ್ಮ ಸಾಮೂಹಿಕ ವಿವಾಹ; ದಾಂಪತ್ಯ ಜೀವನಕ್ಕೆ ಕಾಲಿಡಲಿರುವ 75 ಜೋಡಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 6:08 IST
Last Updated 7 ಡಿಸೆಂಬರ್ 2025, 6:08 IST
<div class="paragraphs"><p>ನವಲಗುಂದ ಮಾಡೆಲ್ ಹೈಸ್ಕೂಲ್ ನಲ್ಲಿ ಸರ್ವ ಧರ್ಮ ಸಾಮೂಹಿಕ ವಿವಾಹ ನೆರವೇರಲಿರುವ ವೇದಿಕೆಯನ್ನು ಶಾಸಕ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ ಶನಿವಾರ ಪರಿಶೀಲಿಸಿದರು&nbsp; &nbsp;</p></div>

ನವಲಗುಂದ ಮಾಡೆಲ್ ಹೈಸ್ಕೂಲ್ ನಲ್ಲಿ ಸರ್ವ ಧರ್ಮ ಸಾಮೂಹಿಕ ವಿವಾಹ ನೆರವೇರಲಿರುವ ವೇದಿಕೆಯನ್ನು ಶಾಸಕ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ ಶನಿವಾರ ಪರಿಶೀಲಿಸಿದರು   

   

 ಪ್ರಜಾವಾಣಿ ಚಿತ್ರ– ಬಿ.ಎಂ. ಕೇದಾರನಾಥ

ನವಲಗುಂದ: ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಡಿ.7ರಂದು ಸರ್ವಧರ್ಮಗಳ 75 ಜೋಡಿ ಸಾಮೂಹಿಕ ವಿವಾಹ ನೆರವೇರಲಿದ್ದು, ಅದಕ್ಕಾಗಿ ಬೃಹತ್‌ ವೇದಿಕೆ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳು ಶನಿವಾರ ಪೂರ್ಣಗೊಂಡವು.

ADVERTISEMENT

ಇದೇ ವೇದಿಕೆಯಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಸುಪುತ್ರ ನವೀನಕುಮಾರ ಆರತಕ್ಷತೆಯೂ ನಡೆಯುತ್ತಿರುವುದು ವಿಶೇಷ. ವಧು-ವರರಿಗೆ ಆಶೀರ್ವದಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು, ಶಾಸಕರು ಆಗಮಿಸಲಿದ್ದಾರೆ.  

ಮಾಡೆಲ್ ಹೈಸ್ಕೂಲ್ ಆವರಣದಲ್ಲಿ 4 ಎಕರೆಯಲ್ಲಿ ಮುಖ್ಯ ಪೆಂಡಾಲ ಬೃಹತ್‌ ಜರ್ಮನ್‌ ಟೆಂಟ್‌ ಹಾಕಲಾಗಿದೆ. ಮೈದಾನ ಪಕ್ಕದಲ್ಕಿರುವ ಹೆಬ್ಬಳ್ಳಿಯವರ 10 ಎಕರೆ ಜಮೀನಿನಲ್ಲಿ ಸಾರ್ವಜನಿಕರ ಊಟ ತಯಾರಿಸಲು 2 ದೊಡ್ಡ ಅಡುಗೆ ಮನೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ 2 ಕಡೆ ಒಟ್ಟು 75 ಕೌಂಟರ್‌ಗಳನ್ನು ತೆರೆಯಲಾಗಿದೆ.

ಅದಕ್ಕೆ ಹೊಂದಿಕೊಂಡಿರುವ ಹುಚ್ಚನಗೌಡರರವರ 26 ಎಕರೆ ಹಾಗೂ ನೀರಾವರಿ ಇಲಾಖೆಯ 13 ಎಕರೆ ಜಾಗೆಯಲ್ಲಿ ಅಂದಾಜು ಒಟ್ಟು 39 ಎಕರೆ ಜಮೀನಿನಲ್ಲಿ ಎಲ್ಲ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೆ 1 ಲಕ್ಷ ಜನರಿಗೆ ಸಿಹಿ ಬುಂದೆ ತಯಾರಿಸಲಾಗುತ್ತಿದೆ. 90 ಸಾವಿರ ಜೋಳದರೊಟ್ಟಿ ಹಾಗೂ ಸಜ್ಜಿ ರೊಟ್ಟಿಗಳನ್ನು ಪ್ರತಿ ಗ್ರಾಮಗಳಿಂದ ಜನರೇ ಸ್ವಂತ ಖರ್ಚಿನಲ್ಲಿ ಮಾಡಿ, ತಂದು ಕೊಟ್ಟಿರುವುದು ವಿಶೇಷ.

ನವಲಗುಂದ ಸರ್ವಧರ್ಮ ಸಾಮೂಹಿಕ ವಿವಾಹದ ಅಡುಗೆ ಸಾಮಗ್ರಿಗಳನ್ನು ಶಾಸಕ ಎನ್‌.ಎಚ್‌. ಕೋನರಡ್ಡಿ ಪ್ರಸಾದ ಅಬ್ಬಯ್ಯ ವೀಕ್ಷಿಸಿದರು     

ನವಲಗುಂದ ಮಾಡೆಲ್ ಹೈಸ್ಕೂಲ್ ನಲ್ಲಿ ಸರ್ವ ಧರ್ಮ ಸಾಮೂಹಿಕ ವಿವಾಹ ನೆರವೇರಲಿರುವ ವೇದಿಕೆಯನ್ನು ಶಾಸಕ ಪ್ರಸಾದ ಅಬ್ಬಯ್ಯ ಎನ್.ಎಚ್. ಕೋನರಡ್ಡಿ ಶನಿವಾರ ಪರಿಶೀಲಿಸಿದರು    

75 ಜೋಡಿ ಸರ್ವ ಧರ್ಮ ಸಾಮೂಹಿಕ ವಿವಾಹದಲ್ಲಿ ನನ್ನ ಪುತ್ರ ನವೀನಕುಮಾರ ಅವರ ಆರತಕ್ಷತೆಯೂ ನಡೆಯಲಿದೆ. ಸಿಎಂ ಡಿಸಿಎಂ ಸಚಿವರು ಶಾಸಕರು ಭಾಗವಹಿಸಲಿದ್ದಾರೆ. ಇಡೀ ಕ್ಷೇತ್ರದ ಜನರು ಇದರಲ್ಲಿ ಭಾಗಿಯಾಗಿರುವುದು ಹೆಮ್ಮೆಯ ಸಂಗತಿ
ಎನ್ ಎಚ್ ಕೋನರಡ್ಡಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.