ADVERTISEMENT

ಸಿದ್ದನಗೌಡ ಪಾಟೀಲರಿಂದ ಹಣ ದುರುಪಯೋಗ; ವಿಚಾರಿಸಿ ವರದಿ ಸಲ್ಲಿಸಲು ಜಡ್ಜ್ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 5:44 IST
Last Updated 13 ಫೆಬ್ರುವರಿ 2026, 5:44 IST
<div class="paragraphs"><p>ಸಿದ್ಧಾರೂಢ ಮಠ</p></div>

ಸಿದ್ಧಾರೂಢ ಮಠ

   

ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಮಠದ ಧರ್ಮದರ್ಶಿಯಾಗಿದ್ದ ಸಿದ್ದನಗೌಡ ಪಾಟೀಲ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಒಂದು ತಿಂಗಳ ಒಳಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಮಠದ ಟ್ರಸ್ಟ್‌ ಕಮಿಟಿ ಆಡಳಿತಾಧಿಕಾರಿಯೂ ಆಗಿರುವ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್.ಭಾರತಿ ಆದೇಶಿಸಿದ್ದಾರೆ.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಚ್.ಆರ್‌.ದೇಶಪಾಂಡೆ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ವಿಚಾರಣೆ ಮುಗಿಯುವವರೆಗೆ ಸಿದ್ಧನಗೌಡ ಪಾಟೀಲ ಅವರು ಧರ್ಮದರ್ಶಿತ್ವದ ಕಾರ್ಯಗಳಲ್ಲಿ ಭಾಗವಹಿಸದಂತೆಯೂ ಆದೇಶಿಸಲಾಗಿದೆ.

ADVERTISEMENT

ಸಿದ್ದನಗೌಡ ಪಾಟೀಲ ಅವರು ಮಠದ ಹೆಸರಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹಿಸಿ, ಮಠಕ್ಕೆ ನೀಡದೆ ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಠದ ಭಕ್ತರು ಒತ್ತಾಯಿಸಿದ್ದರು.

ಆರೋಪ ಕೇಳಿ ಬಂದ ತಕ್ಷಣ ಅವರನ್ನು ಧರ್ಮದರ್ಶಿ ಸ್ಥಾನದಿಂದ ಅಮಾನತು ಮಾಡಲಾಗಿತ್ತು. ಅವರನ್ನು ವಜಾ ಮಾಡಬೇಕು ಎಂದು ಭಕ್ತರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.