ADVERTISEMENT

ಧಾರವಾಡ | ಕೃಷಿ ಬೆಳೆ ಮೇಲೆ ದಾಳಿಯಿಟ್ಟ ಕೋತಿಗಳು!: ಬೆಳೆ ರಕ್ಷಿಸಲು ರೈತರ ಹರಸಾಹಸ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 5:16 IST
Last Updated 30 ಡಿಸೆಂಬರ್ 2024, 5:16 IST
<div class="paragraphs"><p>ಧಾರವಾಡ ತಾಲ್ಲೂಕಿನ ಕಲ್ಲೂರ ಗ್ರಾಮದ ರೈತರ ಜಮೀನಿಗೆ ನುಗ್ಗಿ ಬೆಳೆಗೆ ಹಾನಿ ಮಾಡಿದ ಕೋತಿಗಳು</p></div>

ಧಾರವಾಡ ತಾಲ್ಲೂಕಿನ ಕಲ್ಲೂರ ಗ್ರಾಮದ ರೈತರ ಜಮೀನಿಗೆ ನುಗ್ಗಿ ಬೆಳೆಗೆ ಹಾನಿ ಮಾಡಿದ ಕೋತಿಗಳು

   

ಉಪ್ಪಿನಬೆಟಗೇರಿ: ಕೋತಿಗಳ ಹಾವಳಿಯಿಂದ ಧಾರವಾಡ ತಾಲ್ಲೂಕಿನ ಕಲ್ಲೂರ ಗ್ರಾಮದ ರೈತರು ಬೆಳೆ ರಕ್ಷಿಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಉಪ್ಪಿನಬೆಟಗೇರಿಯಿಂದ ಕಲ್ಲೂರ ಗ್ರಾಮಕ್ಕೆ ತೆರಳುವ ರಸ್ತೆ ಬದಿಯ ಕಟ್ಟಿಗೆ ಕೊರೆಯುವ ಮಿಲ್‌ನಿಂದ ಹಿಡಿದು, ಕಲ್ಲೂರ ಆರೂಢ ಆಶ್ರಮದ ವರೆಗಿನ ಅಕ್ಕ-ಪಕ್ಕದ ಹೊಲದಲ್ಲಿ ತಂಡೋಪತಂಡವಾಗಿ ಬಂದು ಕಡಲೆ, ಜೋಳ, ಗೋವಿನ ಜೋಳ, ಹತ್ತಿ, ತೊಗರಿ ಇನ್ನಿತರ ಬೆಳೆ, ಗಿಡಗಳಿಗೆ ಹಾನಿ ಮಾಡುತ್ತಿವೆ. ರಸ್ತೆ ಪಕ್ಕದಲ್ಲಿರುವ ಗಿಡಗಳಲ್ಲಿ ಕುಳಿತು ಯಾರೂ ಇಲ್ಲದ ಸಮಯದಲ್ಲಿ ಜಮೀನಿಗೆ ನುಗ್ಗುತ್ತಿವೆ.

ADVERTISEMENT

ಹಿಂಗಾರು ಬೆಳೆಗಳು ಉತ್ತಮವಾಗಿ ಬಂದಿದ್ದು, ಮಂಗಗಳ ಕಿರಿಕಿರಿ ರೈತರ ನಿದ್ದೆಗೆಡಿಸಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಹೊಲಕ್ಕೆ ತೆರಳಿ ಕಾಯುವ ಸ್ಥಿತಿ ಎದುರಾಗಿದೆ.

‘ರಸ್ತೆ‌ ಪಕ್ಕದ ಹೊಲಗಳ ರೈತರು ಒಟ್ಟುಗೂಡಿ ತಂಡವಾಗಿ ಬರುವ ಮಂಗ ಗಳನ್ನು ಬೆದರಿಸಿ ತುಪ್ಪರಿ ಹಳ್ಳದವರೆಗೆ ಹೊಡೆದೋಡಿಸುತ್ತೇವೆ. ಆದರೂ ಅವುಗಳು ಮತ್ತೆ ಅದೇ ಮಾರ್ಗವಾಗಿ ಬಂದು ತೊಂದರೆ ನೀಡುತ್ತಿವೆ. ಒಬ್ಬೊಬ್ಬ ರೈತ ಹೋಗಿ ಬೆದರಿಸಿದರೆ ತಿರುಗಿ ನಮ್ಮ ಮೇಲೆಯೇ ತಂಡೊಪತಂಡವಾಗಿ ದಾಳಿ ಮಾಡುತ್ತಿವೆ. ಇವುಗಳಿಗೆ ಹೆದರಿ ಓಡುವಂತಾಗಿದೆ. ಮರದ ಟೊಂಗೆಯಲ್ಲಿ ಅಡಗಿ ಕುಳಿತುಕೊಳ್ಳುವ ಮಂಗಗಳು ಪಟಾಕಿ, ಮತ್ತು ಪ್ರಾಣಿ, ಪಕ್ಷಿ ಬೆದರಿಸುವ ಬಂದೂಕುಗಳಿಗೂ ಬೆದರುತ್ತಿಲ್ಲ. ವಾರದ ಹಿಂದೆ ನನ್ನ ಮೇಲೆ ದಾಳಿ ಮಾಡಿ ಗಾಯ ಮಾಡಿವೆ’ ಎಂದು ರೈತ ಶಿವಾನಂದ ಟಗರಿ ತಿಳಿಸಿದರು.

‘ಕಲ್ಲೂರ ರಸ್ತೆಗೆ ಹೊಂದಿಕೊಂಡ ಜಮೀನಿನ ರೈತರೆಲ್ಲರೂ ಜೊತೆಗೂಡಿ ಕೊಟಬಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕೋತಿಗಳ ಹಾವಳಿ ತಪ್ಪಿಸಬೇಕು ಎಂದು ಮನವಿ ಕೊಡಲು ನಿರ್ಧರಿಸಲಾಗಿತ್ತು. ಪಿಡಿಒ ಕೆಲ ಸದ ಕಾರಣಕ್ಕೆ ಧಾರವಾಡ ಜಿಲ್ಲಾ ಪಂಚಾ ಯಿತಿಯಲ್ಲಿ ಇದ್ದು, ಇನ್ನೊಂದು ದಿನ ಬರುವಂತೆ ತಿಳಿಸಿದ್ದಾರೆ’ ಎಂದು ಕಲ್ಲೂರ ರೈತ ಯಲ್ಲಪ್ಪ ಗಾಣಿಗೇರ ತಿಳಿಸಿದರು.

ರೈತರ ಹೊಲಗಳಿಗೆ ಕೋತಿಗಳ ಕಿರಿಕಿರಿ ಎದುರಾದ ಬಗ್ಗೆ ತಿಳಿದಿಲ್ಲ. ಹಾಗೇನಾದರು ಇದ್ದರೆ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
ಶಶೀರೇಖಾ ಚಕ್ರಸಾಲಿ, ಪಿಡಿಒ, ಕೊಟಬಾಗಿ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.