
ಕುಂದಗೋಳ: ಭಗವಂತ ಸರ್ವಾಂತರ್ಯಾಮಿ, ಹುಟ್ಟು, ಸಾವಿನ ನಡುವೆ ಭಗವಂತನನ್ನು ಕಾಣುವ ಪ್ರಯತ್ನ ನಿರಂತರ ಮಾಡಬೇಕು ಎಂದು ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನಮಠದ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಪಶುಪತಿಹಾಳ ಗ್ರಾಮದ ಬಾಲಲೀಲಾ ಮಹಾಂತ ಶಿವಯೋಗಿಗಳ ಮಠದಲ್ಲಿ ನಡೆದ ತ್ರಿವಿಧ ದಾಸೋಹಿ ಧಾರವಾಡ ಮುರುಘಾಮಠದ ಮೃತ್ಯುಂಜಯಪ್ಪಗಳವರ 51ನೇ ಜಾತ್ರಾ ಮಹೋತ್ಸವ ಮತ್ತು ಮಹಾಂತ ದಾಸೋಹ ಭವನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶರಣರ ಆದರ್ಶದಂತೆ ನಡೆ, ನುಡಿ ಒಳ್ಳೆಯದಾಗಿರುವುದು ಬದುಕಿಗೆ ಬಹುಮುಖ್ಯ. ಅಂತಹ ಬದುಕು ಬಾಳಬೇಕು ಎಂದು ಹೇಳಿದರು.
ಶಾಸಕ ಎಂ.ಆರ್.ಪಾಟೀಲ ದಾಸೋಹ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಪಶುಪತಿಹಾಳ ಗ್ರಾಮವೆಂದರೆ ಧರ್ಮ ಗ್ರಾಮ, ಇಲ್ಲಿ ಧರ್ಮಶ್ರದ್ಧೆ, ಏಕತೆ, ಭಕ್ತಿ ಭಾವ ಜಾಗೃತವಾಗಿದೆ ಎಂದರು.
ಮಾಜಿ ಶಾಸಕ ಎಂ.ಎಸ್.ಅಕ್ಕಿ ಮಾತನಾಡಿದರು. ಧಾರವಾಡ ಮುರುಘಾಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಗುರುಸಿದ್ದ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಹಾಗೂ ವಿಜಯಮಹಾಂತ ದೇವರು ಷಟಸ್ಥಲ್ ಧ್ವಜಾರೋಹಣ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಪಶುಪತಿಹಾಳದ ಮಹಾಂತೇಶ್ವರಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು ಸಾನಿಧ್ಯ ವಹಿಸಿದ್ದರು.
ಬುಧವಾರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ವೀರನಗೌಡ ಪಾಟೀಲ, ಶೇಖಣ್ಣ ಕಟಗಿ, ಶಿವುಪುತ್ರಪ್ಪ ಜಾವೂರ, ಬಸವಂತಪ್ಪ ಛಬ್ಬಿ, ಹೊನ್ನಪ್ಪ ಕಟಗಿ, ಮಹಾಂತೇಶ ಶಿರೂರ, ಹೊನ್ನಪ್ಪ ಕುಂದಗೋಳ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಡೊಳ್ಳಿನ, ಕೆಸಿಸಿ ಬ್ಯಾಂಕ್ ನಿರ್ದೇಶಕ ಉಮೇಶ ಹೆಬಸೂರ, ಯಲ್ಲಪ್ಪ ಡೊಳ್ಳಿನ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಡಾ.ವೀಣಾ ಯಲಿಗಾರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.