ADVERTISEMENT

‘ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ’: ಶಾಸಕ ಎನ್.ಎಚ್.ಕೋನರಡ್ಡಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:11 IST
Last Updated 15 ಜುಲೈ 2025, 7:11 IST
ಶಾಸಕ ಎನ್.ಎಚ್.ಕೋನರಡ್ಡಿ ಅವರು ನವಲಗುಂದದಿಂದ ಅಣ್ಣಿಗೇರಿವರೆಗೆ  ಬಸ್‌ನಲ್ಲಿ ಪ್ರಯಾಣಿಸಿ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ವಿತರಿಸಿದರು
ಶಾಸಕ ಎನ್.ಎಚ್.ಕೋನರಡ್ಡಿ ಅವರು ನವಲಗುಂದದಿಂದ ಅಣ್ಣಿಗೇರಿವರೆಗೆ  ಬಸ್‌ನಲ್ಲಿ ಪ್ರಯಾಣಿಸಿ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ವಿತರಿಸಿದರು   

ನವಲಗುಂದ: ‘ಶಕ್ತಿ ಯೋಜನೆಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ನಿತ್ಯ ದುಡಿಮೆಗೆ ಹೋಗುವ ಮಹಿಳೆಯರು, ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಯರು ಇದರ ಲಾಭ ಪಡೆಯುತ್ತಿದ್ದಾರೆ. ಮುಂದಿನ ಎರಡೂವರೆ ವರ್ಷವೂ ಈ ಯೋಜನೆ ಮುಂದುವರಿಯಲಿದೆ’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ಇಲ್ಲಿನ ಬಸ್‌ ನಿಲ್ದಾಣದಲ್ಲಿ ಸೋಮವಾರ ಏರ್ಪಡಿಸಿದ್ದ ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ನವಲಗುಂದದಿಂದ ಉಳವಿಗೆ ಸಂಚರಿಸುವ ನೂತನ ಬಸ್‌ಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿವೆ. ಶಕ್ತಿ ಯೋಜನೆಯಡಿ ಮಹಿಳೆಯರು ಪ್ರಯಾಣಿಸಿದ ₹12,669 ಕೋಟಿಯನ್ನು ಸರ್ಕಾರವು ಸಾರಿಗೆ ಸಂಸ್ಥೆಗೆ ಪಾವತಿಸಿದ್ದರಿಂದ, ಸಂಸ್ಥೆ ಇಂದು ಲಾಭದಲ್ಲಿದೆ’ ಎಂದರು.

ADVERTISEMENT

ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ಮಾತನಾಡಿದರು.

ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಉಪಾಧ್ಯಕ್ಷೆ ಪರೀದಾಬೇಗಂ ಬಬರ್ಚಿ ಮಾತನಾಡಿರು. ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು

ಸಾರಿಗೆ ಇಲಾಖೆಯ ಗ್ರಾಮೀಣ ವಿಭಾಗದ ನಿಯಂತ್ರಣಾಧಿಕಾರಿ ಎಚ್.ರಾಮನಗೌಡ, ರಾಜೇಂದ್ರ ಆರ್.ಎಂ., ಅಧಿಕಾರಿಗಳಾದ ಎಸ್.ಎನ್.ವಾಲಿ, ರಾಜು ಮಾಲಗಿತ್ತಿ, ಎಸ್.ಪಿ.ಪೂಜಾರ, ವಿ.ಎನ್.ನೀಲಣ್ಣವರ, ಕೆ.ಎನ್.ನಾವಳ್ಳಿ, ಐ.ಎಂ.ಕಟ್ಟಿಮನಿ, ಎಸ್.ಎನ್.ಬರಮಗೌಡ್ರ, ಬಿ.ಎಸ್.ಪಾಟೀಲ, ಪುರಸಭೆ ಸದಸ್ಯರಾದ ಮೋದಿನ ಶಿರೂರು, ಜೀವನ ಪವಾರ, ಕುಮಾರ ಕಲಾಲ್, ಹುಸೇನಬಿ ಧಾರವಾಡ, ಮುನ್ನಾ ಕಲ್ಕುಟ್ರಿ, ಕಿರಣ ಉಳ್ಳಿಗೇರಿ, ಪ್ರಕಾಶ ಗೊಂದಲೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.