ADVERTISEMENT

ಹುಬ್ಬಳ್ಳಿ: ನವಜಾತ ಶಿಶುವಿನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 6:55 IST
Last Updated 8 ಅಕ್ಟೋಬರ್ 2025, 6:55 IST
   

ಹುಬ್ಬಳ್ಳಿ: ಇಲ್ಲಿನ ರಾಮಲಿಂಗೇಶ್ವರ ನಗರದ ಹರ್ಷದರ್ಶಿನಿ ಹೋಟೆಲ್‌ ಬಳಿಯ ಕಸದ ರಾಶಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.

ಶಿಶು ಜೀವಂತವಿದ್ದಾಗ ಅಥವಾ ಮರಣ ಹೊಂದಿದಾಗ ಉದ್ದೇಶಪೂರ್ವಕವಾಗಿ ಯಾರೋ ತಂದು ಎಸೆದು ಹೋಗಿದ್ದಾರೆ ಎಂದು ಗೋಕುಲ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುರಿ ಕಳವು: ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಮೊರಬದ ಅವರ ಹೊಲದಲ್ಲಿ ಮೇಯಿಸಲು ಬಿಟ್ಟಿದ್ದ ₹56 ಸಾವಿರ ಮೌಲ್ಯದ ನಾಲ್ಕು ಕುರಿ ಹಾಗೂ ಎರಡು ಟಗರುಗಳನ್ನು ಕಳವು ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.