ಹುಬ್ಬಳ್ಳಿ: ಕೋವಿಡ್ ಭೀತಿಯ ಕಷ್ಟದ ಕಾಲದಲ್ಲಿಯೂ ವಾರಿಯರ್‌ಗಳಾದ ಕರ್ತವ್ಯ ನಿಭಾಯಿಸಿದ ಪತ್ರಿಕಾ ವಿತರಕರ ಮುಂಜಾವು ಶುಕ್ರವಾರ ಎಂದಿನಂತಿರಲಿಲ್ಲ. ಮನೆಮನೆಗಳಿಗೆ ಹೋಗಿ ಪತ್ರಿಕೆ ಹಂಚಿ ಬಂದ ಅವರಲ್ಲಿ ಸಂಭ್ರಮ ಮನೆ ಮಾಡಿತ್ತು. ಪತ್ರಿಕಾ ವಿತರಕರ ದಿನದ ಅಂಗವಾಗಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
ಹುಬ್ಬಳ್ಳಿಯ ಪ್ರಜಾವಾಣಿ ಕಚೇರಿ ಎದುರು ಸೇರಿದ ಪತ್ರಿಕಾ ವಿತರಕರು ಕೇಕ್ ಕತ್ತರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಖುಷಿ ಪಟ್ಟರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ವಿತರಕರಿಗೆ ಹೂಗುಚ್ಛ ನೀಡಿ ಸಿಹಿ ಹಂಚಲಾಯಿತು. ವಿದ್ಯಾನಗರ, ಕೊಪ್ಪಿಕರ್ ರೋಡ್, ಹಳೇ ಹುಬ್ಬಳ್ಳಿ ಮತ್ತು ಗೋಕುಲ ರಸ್ತೆಯಲ್ಲಿ ಪತ್ರಿಕಾ ವಿತರಕರ ದಿನದ ಸಡಗರ ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.