ಹುಬ್ಬಳ್ಳಿ: ‘ಬಿಜೆಪಿ ಅಧಿಕಾರದಲ್ಲಿದ್ದಾಗ ಆದ ನಷ್ಟವನ್ನು ನಾವು ಈಗ ಸರಿಪಡಿಸುತ್ತಿದ್ದೇವೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.
ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಸೊಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಡೀಸೆಲ್, ಪೆಟ್ರೋಲ್, ಟೈರ್, ಬಸ್ ಬಿಡಿಭಾಗಗಳ ದರ ಏರಿಕೆಯಾಗಿದೆ. ಅದಕ್ಕಾಗಿ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದೇವೆ. ಜನರ ಅನುಕೂಲ ದೃಷ್ಟಿ ಇರಿಸಿಕೊಂಡು ಮುಖ್ಯಮಂತ್ರಿ ಹಾಗೂ ಸಚಿವರು ಸಾಧಕ– ಬಾಧಕಗಳನ್ನು ನೋಡಿ ನಿರ್ಧರಿಸಿದ್ದಾರೆ’ ಎಂದರು.
‘ನಾವು ಲಾಭ ನೋಡುತ್ತಿಲ್ಲ. ಇಲ್ಲಿ ಲಾಭ ಮಾಡಿ, ಆ ಹಣವನ್ನು ಬೇರೆಡೆ ಉಪಯೋಗಿಸಬೇಕು ಎಂಬ ಉದ್ದೇಶವೂ ಇಲ್ಲ. ಸಂಸ್ಥೆ ಉಳಿಯದಿದ್ದರೆ ಜನರಿಗೆ ಕಷ್ಟ. ಜನರ ಕಷ್ಟ ಕಡಿಮೆ ಮಾಡಲು ಸಂಸ್ಥೆ ಉಳಿಸಿಕೊಳ್ಳಬೇಕಿದೆ’ ಎಂದರು.
‘ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗಿಲ್ಲ. ನನ್ನ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಬಿಜೆಪಿಯವರು ಸುಮ್ಮನೆ ನಮಗೆ ಕಲ್ಲು ಹೊಡೆದು, ಕೆಣಕುತ್ತಿದ್ದಾರೆ. ಗ್ಯಾರಂಟಿಗಳು ಸಹ ಸ್ವಲ್ಪ ಹೊರೆ ಆಗಿದೆ. ಇನ್ನು ಸ್ವಲ್ಪ ದಿನದಲ್ಲಿ ಸರಿ ಪಡಿಸಿಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.