ADVERTISEMENT

ಹುಬ್ಬಳ್ಳಿ: ‘ಫೋಟೊ ಟುಡೆ’ ಪ್ರದರ್ಶನ, ಮಾರಾಟ ಜುಲೈ 8ರಿಂದ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನ ಆಯೋಜನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 4:55 IST
Last Updated 25 ಜೂನ್ 2022, 4:55 IST

ಹುಬ್ಬಳ್ಳಿ: ‘ಕರ್ನಾಟಕ ವಿಡಿಯೊ ಮತ್ತು ಫೋಟೊ ಅಸೋಸಿಯೇಷನ್ ಹಾಗೂ ಬೈಸೆಲ್ ಇಂಟರಾಕ್ಷನ್ ಪ್ರೈವೇಟ್ ಲಿಮಿಟೆಡ್‌ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಮೈದಾನದಲ್ಲಿ ಜುಲೈ 8ರಿಂದ 10ರವರೆಗೆ ಮೂರು ದಿನ ಫೋಟೊ ಟುಡೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ’ ಎಂದು ಸಂಘದ ಉಪಾಧ್ಯಕ್ಷ ಎಚ್‌.ವಿ. ಕೃಷ್ಣಪ್ಪ ಹೇಳಿದರು.

‘ಅಂತರರಾಷ್ಟ್ರೀಯ ಮಟ್ಟದ ಫೋಟೊಗ್ರಫಿ, ವಿಡಿಯೊಗ್ರಫಿ, ಆಲ್ಬಂ ಹಾಗೂ ಡಿಜಿಟಲ್ ಇಮೇಜಿಂಗ್ ಪ್ರದರ್ಶನ ಇರಲಿದೆ. ಕ್ಯಾನಾನ್, ನಿಕಾನ್, ಪ್ಯಾನಸೊನಿಕ್, ಸೋನಿ, ಫ್ಯುಜಿ ಸೇರಿದಂತೆ ವಿವಿಧ ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. 5 ಸಾವಿರಕ್ಕೂ ಹೆಚ್ಚು ಉಪಕರಣಗಳ ಪ್ರದರ್ಶನ ನಡೆಯಲಿದೆ. ಸುಮಾರು 250 ಮಳಿಗೆಗಳನ್ನು ತೆರೆಯಲಾಗುವುದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹುಬ್ಬಳ್ಳಿ ಫೋಟೊ ಮತ್ತು ವಿಡಿಯೊಗ್ರಾಫರ್ಸ್ ಅಸೋಸಿಯೇಷನ್ (ಎಚ್‌ವಿಪಿಎ) ಅಧ್ಯಕ್ಷ ಕಿರಣ ಬಾಕಳೆ ಮಾತನಾಡಿ, ‘ಪ್ರದರ್ಶನದಲ್ಲಿ ಕ್ಯಾಮೆರಾಗಳ ಆಪರೇಟಿಂಗ್ ಮತ್ತು ನಿರ್ವಹಣೆ ಕುರಿತು ಕಾರ್ಯಾಗಾರ, ಮಾಡೆಲಿಂಗ್ ಫೋಟೊಗ್ರಫಿ ಹಾಗೂ ಫ್ಯಾಷನ್ ಶೋ ಸಹ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ಅಸೋಸಿಯೇಷನ್ ಅಧ್ಯಕ್ಷ ಬೆಂಜಮಿನ್, ಹುಬ್ಬಳ್ಳಿ ಅಸೋಸಿಯೇಷನ್‌ನ ದಿನೇಶ ದಾಬಡೆ, ಅನಿಲ ತುರಮರಿ, ರವೀಂದ್ರ ಕಾಟಿಗೇರ ಹಾಗೂ ಆನಂದ ರಾಜೋಳಿ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.