
ಹುಬ್ಬಳ್ಳಿ: ‘ಛಾಯಾಗ್ರಹಣ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ನಿರಂತರವಾಗಿ ಬದಲಾಗುತ್ತಿದ್ದು, ಇದಕ್ಕೆ ಛಾಯಾಗ್ರಾಹಕರು ಹೊಂದಿಕೊಳ್ಳಬೇಕಾದ ಅಗತ್ಯವಿದೆ’ ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥೂರ್ ಹೇಳಿದರು.
ನಗರದ ವಾಸವಿ ಮಹಲ್‌ನಲ್ಲಿ ಕರ್ನಾಟಕ ವಿಡಿಯೊ ಮತ್ತು ಫೋಟೊ ಅಸೋಸಿಯೇಷನ್ ಆಶ್ರಯದಲ್ಲಿ ಶನಿವಾರ ನಡೆದ ‘11ನೇ ಆವೃತ್ತಿಯ ಡಿಜಿ ಫೋಟೊ ಎಕ್ಸ್‌ಪೋ’ ಉದ್ಘಾಟಿಸಿ, ಮಾತನಾಡಿದರು.
‘ಒಂದೇ ವೇದಿಕೆಯಲ್ಲಿ ಛಾಯಾಗ್ರಹಣಕ್ಕೆ ಸಂಬಂಧಿಸಿದ ಎಲ್ಲ ವಸ್ತು, ಉಪಕರಣ ಹಾಗೂ ಸಾಫ್ಟ್‌ವೇರ್‌ಗಳನ್ನು ಪರಿಚಯಿಸುವ ಪ್ರದರ್ಶನಗಳು, ಛಾಯಾಗ್ರಾಹಕರ ವೃತ್ತಿ ಬದುಕಿಗೆ ಉಪಯುಕ್ತವಾಗಿವೆ’ ಎಂದರು.
ವಿ.ಎ.ಕೆ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಕಾಟವೆ ಹಾಗೂ ಪಾಲಿಕೆ ಸದಸ್ಯ ಚೇತನ ಹಿರೇಕೆರೂರು ಮಾತನಾಡಿದರು.
ಇದೇ ವೇಳೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ 12 ಮಂದಿ ಛಾಯಾಗ್ರಾಹಕರಿಗೆ ‘ಉತ್ತರ ಕರ್ನಾಟಕ ಛಾಯಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಸೋಸಿಯೇಷನ್ ಅಧ್ಯಕ್ಷ ಕಿರಣ್ ಬಾಕಳೆ, ಸಂಘದ ಪ್ರಮುಖರಾದ ಶ್ರೀನಿವಾಸ್, ದಿನೇಶ್ ದಾಬಡೆ, ರವೀಂದ್ರ ಕಾಟೀಗರ, ಅನಿಲ್ ತುರುಮರಿ, ಅನಿಲ್ ಕಲಾಲ ಸೇರಿದಂತೆ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.