ADVERTISEMENT

ಹುಬ್ಬಳ್ಳಿ | ಸಶಸ್ತ್ರ ಮೀಸಲು ಪಡೆ ಚಾಂಪಿಯನ್‌

ಹು–ಧಾ ಮಹಾನಗರ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ; ವೆಂಕಟೇಶ ನಾಯ್ಕ, ಸುಷ್ಮಿತಾ ಪಾಟೀಲ ವೀರಾಗ್ರಣಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 2:51 IST
Last Updated 16 ನವೆಂಬರ್ 2025, 2:51 IST
ಹು–ಧಾ ಮಹಾನಗರ ಪೊಲೀಸ್‌ ಘಟಕದ ವಾರ್ಷಿಕ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಪ್ರಶಸ್ತಿ ಪಡೆದ ಸಿಎಆರ್‌ ವಿಭಾಗಕ್ಕೆ ಪಾರಿತೋಷಕ ನೀಡಲಾಯಿತು. ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಕಮಿಷನರ್‌ ಎನ್‌. ಶಶಿಕುಮಾರ್‌ ಹಾಜರಿದ್ದರು
ಹು–ಧಾ ಮಹಾನಗರ ಪೊಲೀಸ್‌ ಘಟಕದ ವಾರ್ಷಿಕ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಪ್ರಶಸ್ತಿ ಪಡೆದ ಸಿಎಆರ್‌ ವಿಭಾಗಕ್ಕೆ ಪಾರಿತೋಷಕ ನೀಡಲಾಯಿತು. ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಕಮಿಷನರ್‌ ಎನ್‌. ಶಶಿಕುಮಾರ್‌ ಹಾಜರಿದ್ದರು   

ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯ ಹಳೇ ಸಿಎಆರ್‌ ಮೈದಾನದಲ್ಲಿ ನಡೆದ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಘಟಕದ ವಾರ್ಷಿಕ ಕ್ರೀಡಾಕೂಟದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಉಪವಿಭಾಗ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಪು‌ರುಷರ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಧಾರವಾಡ ವಿಭಾಗದ ವೆಂಕಟೇಶ ನಾಯ್ಕ ಮತ್ತು ಮಹಿಳೆಯರ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಸಂಚಾರ ವಿಭಾಗದ ಸುಷ್ಮಿತಾ ಪಾಟೀಲ ತಮ್ಮದಾಗಿಸಿಕೊಂಡರು.

ವಾಲಿಬಾಲ್‌ ಪಂದ್ಯದಲ್ಲಿ ಸಂಚಾರ ವಿಭಾಗ ಪ್ರಥಮ, ಸಿಎಆರ್‌ ವಿಭಾಗ ದ್ವಿತೀಯ; ಕಬಡ್ಡಿಯಲ್ಲಿ ಸಿಎಆರ್‌ ವಿಭಾಗ ಪ್ರಥಮ, ಸಂಚಾರ ವಿಭಾಗ ದ್ವಿತೀಯ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸಿಎಆರ್‌ ವಿಭಾಗ ಪ್ರಥಮ ಹಾಗೂ ಸಂಚಾರ ವಿಭಾಗ ದ್ವಿತೀಯ ಸ್ಥಾನ ಪಡೆದವು.

ADVERTISEMENT

ಪಿಎಸ್‌ಐ ಮೇಲ್ಪಟ್ಟ ಅಧಿಕಾರಿಗಳಿಗೆ ನಡೆದ 303 ರೈಫಲ್‌ ಶೂಟಿಂಗ್‌ನಲ್ಲಿ ಸಿಸಿಆರ್‌ಬಿಯ ವಿಜಯಕುಮಾರ ಟಿ.(ಪ್ರಥಮ), ಉತ್ತರ ಸಂಚಾರ ಠಾಣೆಯ ಮನೋಹರ ಜೆ.(ದ್ವಿತೀಯ), ಉತ್ತರ ಸಂಚಾರ ಠಾಣೆಯ ಸಂಗಮೇಶ ಪಾಲುದಾರಿ (ತೃತೀಯ); ರಿವಾಲ್ವರ್‌ ಶೂಟಿಂಗ್‌ನಲ್ಲಿ ಹಳೇಹುಬ್ಬಳ್ಳಿ ಠಾಣೆಯ ವಿಶ್ವನಾಥ (ಪ್ರಥಮ), ಶರಣಪ್ಪ ಬಿ.(ದ್ವಿತೀಯ), ನಾಗರಾಜ ಪಾಟೀಲ (ತೃತೀಯ); ರಂಗೋಲಿ ಸ್ಪರ್ಧೆಯಲ್ಲಿ ನೇತ್ರಾವತಿ ಕುದ್ರ ಬಹುಮಾನ ಪಡೆದರು.

303 ರೈಫಲ್‌ ಸ್ಪರ್ಧೆ (ಪುರುಷ–ಮಹಿಳಾ ಸಿಬ್ಬಂದಿ): ಉತ್ತರ ಸಂಚಾರ ಠಾಣೆಯ ಸಚಿನ ನೀಲರಪ್ಪ (ಪ್ರಥಮ), ಘಂಟಿಕೇರಿ ಠಾಣೆಯ ರೋಹನ ಹನಕನಹಳ್ಳಿ (ದ್ವಿತೀಯ), ಸಿಎಆರ್‌ನ ಮುತ್ತಪ್ಪ ದೊಡ್ಡಮನಿ (ತೃತೀಯ).

ಪಿಎಸ್‌ಐ (ಮಹಿಳಾ ವಿಭಾಗ), 100 ಮೀ. ಓಟ: ಸಂಚಾರ ವಿಭಾಗದ ಸ್ವಾತಿ ಮುರಾರಿ (ಪ್ರಥಮ), ಧಾರವಾಡ ವಿಭಾಗದ ಎಲ್‌.ಕೆ. ಕೊಡಬಾಳ (ದ್ವಿತೀಯ), ಸಂಚಾರ ವಿಭಾಗದ ಪದ್ಮಮ್ಮ (ತೃತೀಯ); ಗುಂಡು ಎಸೆತ: ಸಂಚಾರ ವಿಭಾಗದ ಪದ್ಮಮ್ಮ (ಪ್ರಥಮ), ದಕ್ಷಿಣ ವಿಭಾಗದ ಜೆ.ಎಸ್‌. ಚಲವಾದಿ (ದ್ವಿತೀಯ), ಸಂಚಾರ ವಿಭಾಗದ ಸ್ವಾತಿ ಮುರಾರಿ (ತೃತೀಯ).

ಪಿಎಸ್‌ಐ ಮೇಲ್ಪಟ್ಟ ಅಧಿಕಾರಿಗಳ ಕ್ರೀಡೆ, 100 ಮೀ. ಓಟ: ಸಿಎಆರ್‌ ವಿಭಾಗದ ನಿಸಾರ್ ಅಹ್ಮದ್‌ (ಪ್ರಥಮ), ಧಾರವಾಡ ವಿಭಾಗದ ಮಲ್ಲಿಕಾರ್ಜುನ (ದ್ವಿತೀಯ) ಮತ್ತು ವಿನೋದ ಬಿ.(ತೃತೀಯ); ಗುಂಡು ಎಸೆತ: ದಕ್ಷಿಣ ವಿಭಾಗದ ರವಿ ವಡ್ಡರ (ಪ್ರಥಮ), ಧಾರವಾಡ ವಿಭಾಗದ ಮಲ್ಲಿಕಾರ್ಜುನ (ದ್ವಿತೀಯ), ಉತ್ತರ ವಿಭಾಗದ ಚಂದ್ರು (ತೃತೀಯ).

ಲಿಪಿಕ ವರ್ಗ, ಪುರುಷರ 100 ಮೀ. ಓಟ: ಎಂ. ಜಾಫರ್‌(ಪ್ರಥಮ), ರಾಜೇಶ ಮಠ (ದ್ವಿತೀಯ), ಸುರೇಶ ಕರಗುಪ್ಪಿ (ತೃತೀಯ). ಗುಂಡು ಎಸೆತ: ಜಾಫರ್‌ ಖಾಜಿ (ಪ್ರಥಮ), ಸಿದ್ದು ಸುಣಗದ (ದ್ವಿತೀಯ), ಸಾಯಿ–ಲಕ್ಷ್ಮಣ (ತೃತೀಯ). ಮಹಿಳಾ ವಿಭಾಗ, 50 ಮೀ. ಓಟ: ರಾಜೇಶ್ವರಿ ಪತ್ತಾರ (ಪ್ರಥಮ), ಲಕ್ಷ್ಮಿಬಾಯಿ ಮೆಣಸಿನಕಾಯಿ (ದ್ವಿತೀಯ), ಆರ್‌.ಎ. ಮದರಂಗಿ (ತೃತೀಯ); ಗುಂಡು ಎಸೆತ: ರಾಜೇಶ್ವರಿ ಪತ್ತಾರ (ಪ್ರಥಮ), ಲಕ್ಷ್ಮಿಬಾಯಿ ಮೆಣಸಿನಕಾಯಿ (ದ್ವಿತೀಯ), ಸುನಿತಾ ನವಲೆ (ತೃತೀಯ).

ಪುರುಷರ ಕ್ರೀಡೆ, 100 ಮೀ. ಓಟ: ಧಾರವಾಡ ವಿಭಾಗದ ವೆಂಕಟೇಶ ನಾಯ್ಕ (ಪ್ರಥಮ), ಸಿಎಆರ್‌ ವಿಭಾಗದ ಈರಣ್ಣ ದೇಸಾಯಿ (ದ್ವಿತೀಯ), ಧಾರವಾಡ ವಿಭಾಗದ ಚಂದ್ರು ಲಮಾಣಿ ಮತ್ತು ನೆಹರು ಲಮಾಣಿ (ತೃತೀಯ). 400 ಮೀ. ಓಟ: ಧಾರವಾಡ ವಿಭಾಗದ ವೆಂಕಟೇಶ ನಾಯ್ಕ (ಪ್ರಥಮ), ಉತ್ತರ ವಿಭಾಗದ ಚಂದ್ರು ಲಮಾಣಿ (ದ್ವಿತೀಯ), ಸಿಎಆರ್‌ ವಿಭಾಗದ ಅಜರುದ್ದೀನ್‌ ಹುಲಗೂರ (ತೃತೀಯ); 400 ಮೀ. ರಿಲೆ: ಸಿಎಆರ್‌ ವಿಭಾಗ ಪ್ರಥಮ,  ಧಾರವಾಡ ವಿಭಾಗ ದ್ವಿತೀಯ; ಉದ್ದ ಜಿಗಿತ: ಧಾರವಾಡ ವಿಭಾಗದ ವೆಂಕಟೇಶ ನಾಯ್ಕ (ಪ್ರಥಮ), ಉತ್ತರ ವಿಭಾಗದ ಸಿಚಿನ ಟಿ.(ದ್ವಿತೀಯ), ನಿಂಗಪ್ಪ ಲಮಾಣಿ (ತೃತೀಯ); ಎತ್ತರ ಜಿಗಿತ: ವೆಂಕಟೇಶ ನಾಯ್ಕ (ಪ್ರಥಮ), ಸಚಿನ ಟಿ.(ದ್ವಿತೀಯ), ಅಮರ (ತೃತೀಯ).

ಮಹಿಳಾ ಕ್ರೀಡೆ, 100 ಮೀ. ಓಟ: ಸುಷ್ಮಿತಾ ಪಾಟೀಲ (ಪ್ರಥಮ), ರುಕ್ಮಿಣಿ (ದ್ವಿತೀಯ), ವಿದ್ಯಾ ಭಜಂತ್ರಿ (ತೃತೀಯ); 400 ಮೀ. ಓಟ: ಸುಷ್ಮಿತಾ ಪಾಟೀಲ (ಪ್ರಥಮ), ರುಕ್ಮಿಣಿ (ದ್ವಿತೀಯ), ವಿದ್ಯಾ ಭಜಂತ್ರಿ (ತೃತೀಯ); ಉದ್ದ ಜಿಗಿತ: ಸುಷ್ಮಿತಾ ಪಾಟೀಲ (ಪ್ರಥಮ), ರುಕ್ಮಿಣಿ (ದ್ವಿತೀಯ), ವಿದ್ಯಾ ಭಜಂತ್ರಿ (ತೃತೀಯ); ಎತ್ತರ ಜಿಗಿತ: ವಿ.ಕೆ. ದ್ಯಾವನೂರ (ಪ್ರಥಮ), ಸುಷ್ಮಿತಾ ಪಾಟೀಲ (ದ್ವಿತೀಯ); ದೀಪಾ ವೈ.(ತೃತೀಯ); ಗುಂಡು ಎಸೆತ: ರುಕ್ಮಿಣಿ ಎಸ್‌.(ಪ್ರಥಮ), ವಿದ್ಯಾ ಭಜಂತ್ರಿ (ದ್ವಿತೀಯ), ಸುಷ್ಮಿತಾ ಪಾಟೀಲ (ತೃತೀಯ).

‘ಪೊಲೀಸ್‌ ಕರ್ತವ್ಯಕ್ಕೆ ಮಿತಿಯಿಲ್ಲ’

ಹುಬ್ಬಳ್ಳಿ: ‘ಪೊಲೀಸರ ಕರ್ತವ್ಯಕ್ಕೆ ಸಮಯದ ಮಿತಿಯಿರುವುದಿಲ್ಲ. ಹೀಗಾಗಿ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಮುಂದಾಗಬೇಕು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಹೇಳಿದರು. ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ‌ ವಿತರಿಸಿ ಅವರು ಮಾತನಾಡಿದರು. ‘ಒಂದು ಲಕ್ಷ ಜನಸಂಖ್ಯೆಗೆ ಸುಮಾರು 200ಕ್ಕೂ ಅಧಿಕ ಪೊಲೀಸರು ಇರಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಕಡಿಮೆ ಪೊಲೀಸರಿದ್ದಾರೆ. ರಾಜ್ಯದಲ್ಲಿ 1 ಲಕ್ಷ ಜನಸಂಖ್ಯೆಗೆ 142 ಪೊಲೀಸರು ಮಾತ್ರ ಇದ್ದಾರೆ. ಪೊಲೀಸರ ಕೆಲಸ ಯಾರ ಕಣ್ಣಿಗೂ ಕಾಣುವುದಿಲ್ಲ’ ಎಂದರು. ಪೊಲೀಸ್‌ ಕಮಿಷನರ್‌ ಎನ್. ಶಶಿಕುಮಾರ್ ಹಾಗೂ ಅಧಿಕಾರಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.